ವಿಜಯಪುರ : ಮೋದಿ, ಕೇಂದ್ರ ಸರ್ಕಾರ ಅವಕಾಶ ಕೊಟ್ಟರೆ ಪಾಕಿಸ್ತಾನದ ಜೊತೆ ಯುದ್ದ ಮಾಡುತ್ತೇನೆ ಎಂಬ ಜಮೀರ್ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ಜಮೀರ್ ಏನು ಹೇಳಿಕೆ ಕೊಡದೆ ಸುಮ್ಮನಿದ್ದರೆ, ಅದೇ ಈ ದೇಶಕ್ಕೆ ಅವರು ಮಾಡುವ ದೊಡ್ಡ ಸೇವೆ ಎಂದು ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಜೋಶಿ ‘ ಜಮೀರ್ ಶಾಂತವಾಗಿದ್ದರೇ ಸಾಕು, ನೀವೆನೂ ಮಾಡೋದು ಬೇಡ, ದೇಶದ ರಕ್ಷಣೆಗೆ ನಿಂತಿರುವ ಮಿಲಿಟರಿಯನ್ನ ನಂಬಿ ಸಾಕು. ನಿಮ್ಮ ಭಾಷಣವೂ ಬೇಡ, ನೀವು ಅಲ್ಲಿಗೆ ಹೋಗುವುದು ಬೇಡ. ಸೈನ್ಯದ ಶಕ್ತಿ, ಸೈನಿಕರು, ಇಂಟಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ, ಸುಮ್ಮನೇ ಹೇಳಿಕೆ ಕೊಡದೆ ಬಾಯಿ ಮುಚ್ಚಿಕೊಂಡಿದ್ದರೆ ಅದೇ ನೀವು ಈ ದೇಶಕ್ಕೆ ಮಾಡೋ ದೊಡ್ಡ ಸೇವೆ ಎಂದು ಹೇಳಿದ್ದರು.
ಇದನ್ನೂ ಓದಿ :‘ಮೋದಿ ಅವಕಾಶ ಕೊಟ್ಟರೆ ನಾನು ಯುದ್ದಕ್ಕೆ ಹೋಗುತ್ತೇನೆ’: ಪಾಕ್ ವಿರುದ್ದ ಕದನಕ್ಕೆ ಇಳಿದ ಜಮೀರ್
ಮುಂದುವರಿದು ಮಾತನಾಡಿದ ಜೋಶಿ ‘ಜಮೀರ್ ದೊಡ್ಡ ತ್ಯಾಗಕ್ಕೆ ಹೊರಟಿದ್ದಾರೆ, ಅವರಂತ ದೊಡ್ಡ ತ್ಯಾಗದವರು ಯಾರು ಇಲ್ಲ. ನೀವು, ನಿಮ್ಮ ಪಕ್ಷದವರು ಶಾಂತವಾಗಿರಿ. ಜಮೀರ್, ಸಂತೋಷ ಲಾಡ್, ಖರ್ಗೆ, ಸಿದ್ದರಾಮಯ್ಯ ಸುಮ್ಮನಿದ್ದರೆ ಸಾಕು. ಡಿ.ಕೆ ಶಿವಕುಮಾರ್ ಟೆರೆರಿಸ್ಟ್‌ಗಳನ್ನ ಬ್ರದರ್ ಅನ್ನದಿದ್ದರೆ ಸಾಕು. ನಂತರ ಸೇನೆ ಎಲ್ಲವನ್ನು ನಿಭಾಯಿಸುತ್ತದೆ. ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ ಎಂದು ಪ್ರಹ್ಲಾದ್ ಜೋಶಿ ಹೇಳಿದರು.