ಹುಬ್ಬಳ್ಳಿ : ಕಳೆದ ಏಪ್ರೀಲ್ 13ರಂದು 5 ವರ್ಷದ ಬಾಲಕಿ ಮೇಲೆ ಅತ್ಯಚಾರವೆಸಗಿದ್ದ ಕಾಮುಕನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಇಷ್ಟು ದಿನವಾದರೂ ಆತನ ಕುಟುಂಬಸ್ಥರು ಪತ್ತೆಯಾಗದ ಹಿನ್ನೆಲೆ ಆತನ ಶವದ ಅಂತಿಮ ಸಂಸ್ಕಾರವನ್ನು ಪೊಲೀಸರೆ ಮಾಡಿ ಮುಗಿಸಿದ್ದಾರೆ.
ಇದನ್ನೂ ಓದು :‘ಉಗ್ರ ದಾಳಿಗೆ ಕನ್ನಡ ಕಾರಣ’ ಎಂದಿದ್ದ ಗಾಯಕ ಸೋನು ನಿಗಮ್ ವಿರುದ್ದ FIR ದಾಖಲು
ಕಳೆದ ಏಪ್ರೀಲ್ 13ರಂದು ಹುಬ್ಬಳ್ಳಿಯಲ್ಲಿ ನಡೆದ ರೇಪ್ ಆಂಡ್ ಮರ್ಡರ್ ಕೇಸ್ ಇಡೀ ದೇಶಾಧ್ಯಂತ ಸುದ್ದಿಯಾಗಿತ್ತು. ಬಿಹಾರ್ ಮೂಲದ ರಿತೇಶ್ ಕುಮಾರ್ ಎಂಬಾತ ಮನೆಯ ಬಳಿ ಆಟವಾಡುತ್ತಿದ್ದ 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಕೊಲೆ ಮಾಡಿದ್ದ. ಘಟನೆ ಸಂಬಂಧ ಹುಬ್ಬಳ್ಳಿಯಲ್ಲಿ ಜನರು ತೀವ್ರ ಪ್ರತಿಭಟನೆ ನಡೆಸಿದ್ದರು. ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು. ಕೂಡಲೇ ಎಚ್ಚೆತ್ತು ಆರೋಪಿಯ ಬಂಧನಕ್ಕೆ ಮುಂದಾಗಿದ್ದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿದ್ದರು.
ಇದನ್ನೂ ಓದಿ :Viral Video: ಪ್ರೇಯಸಿ ಜೊತೆ ನೂಡಲ್ಸ್ ತಿನ್ನುತ್ತಿದ್ದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ಪೋಷಕರು
ಆದರೆ ಆರೋಪಿ ರಿತೇಶ್ ಕುಮಾರ್ನನ್ನು ಬಂಧಿಸಲು ಹೋದಾಗ ಪೋಲಿಸರ ಮೇಲೆ ದಾಳಿ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಆರೋಪಿಯನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಆದರೆ ಅಂದಿನಿಂದಲೂ ಆರೋಪಿಯ ಶವ ಕಿಮ್ಸ್ ಆಸ್ಪತ್ರೆಯ ಶವಗಾರದಲ್ಲಿತ್ತು. ಆರೋಪಿ ಶವದ ಪೋಸ್ಟಮಾರ್ಟ್ ಮಾಡಿ ಮುಗಿಸಿದ್ದ ವೈದ್ಯರು ಆತನ ಶವವನ್ನು ರಕ್ಷಿಸಿದ್ದರು. ಹೈಕೋರ್ಟ್ ಕೂಡ ಆರೋಪಿ ಶವಸಂಸ್ಕಾರಕ್ಕೆ ಅನುಮತಿ ನೀಡಿತ್ತು.
ಪೊಲೀಸರು ಆರೋಪಿ ರಿತೇಶ್ ಕುಮಾರ್ ಕುಟುಂಬಸ್ಥರಿಗಾಗಿ ಅನೇಕ ಕಡೆ ಪರಿಶೀಲನೆ ನಡೆಸಿದ್ದರು. ಆದರೆ ಸಂಬಂಧಿಗಳು ಪತ್ತೆಯಾಗದ ಹಿನ್ನಲ್ಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಮ್ಮುಖದಲ್ಲಿ ಹುಬ್ಬಳ್ಳಿಯ ಬಿಡ್ನಾಳದ ರುದ್ರಭೂಮಿಯಲ್ಲಿ ಆರೋಪಿ ರಿತೇಶ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿದೆ.