ಚೆನ್ನೈ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧ ನಡೆಸಿದ ಉಗ್ರರು ಇದೀಗ ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಉಗ್ರರು ಚೆನ್ನೈನಿಂದ ವಿಮಾನದಲ್ಲಿ ಲಂಕಾ ರಾಜಧಾನಿ ಕೊಲಂಬೊ ತಲುಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಲಂಕಾ ಅಧಿಕಾರಿಗಳಿಗೆ ನೀಡಿದ ಮಾಹಿತಿ ನೀಡಿ ಆಧರಿಸಿ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BIA) ತೀವ್ರ ಶೋಧ ನಡೆಸಲಾಯಿತು. ಕೊಲಂಬೊ ಪೊಲೀಸರು ಹಾಗೂ ವಿಶೇಷ ಭದ್ರತಾ ಪಡೆಗಳಿಂದ ಏರ್‌ಪೋರ್ಟ್‌ನಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ಇದನ್ನೂ ಓದಿ:ಪಹಲ್ಗಾಮ್ ಬಗ್ಗೆ ಮಾತನಾಡಲು ಹೋಗಿ ಪೊಲೀಸ್ ಕೇಸ್ ಹಾಕಿಸಿಕೊಂಡ ವಿಜಯ್ ದೇವರಕೊಂಡ
ಈ ಕುರಿತು ಶ್ರೀಲಂಕಾ ಏರ್ಲೈನ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, 4R-ALS ವಿಮಾನದಿಂದ ನಿರ್ವಹಿಸಲ್ಪಡುವ UL 122 ವಿಮಾನವನ್ನು ಚೆನ್ನೈನಿಂದ ಕೊಲಂಬೊಗೆ ಬಂದ ನಂತರ ಭದ್ರತಾ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದರು ಎಂದು ಶ್ರೀಲಂಕಾ ಏರ್ಲೈನ್ಸ್ ತಿಳಿಸಿದೆ. “ಇಂದು (ಮೇ 3) ಬೆಳಿಗ್ಗೆ 11.59 ಗಂಟೆಗೆ ಚೆನ್ನೈನಿಂದ ಕೊಲಂಬೊಗೆ ಬಂದಿಳಿದ 4R-ALS ವಿಮಾನದಿಂದ ನಿರ್ವಹಿಸಲ್ಪಡುವ UL 122 ವಿಮಾನವನ್ನು ಸಮಗ್ರ ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಶ್ರೀಲಂಕನ್ ಏರ್ಲೈನ್ಸ್ ಸಾರ್ವಜನಿಕರಿಗೆ ತಿಳಿಸಲು ಬಯಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ :KSRTC ಬಸ್-ಆಟೋ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಇಬ್ಬರು ಸಾ*ವು, ನಾಲ್ವರಿಗೆ ಗಾಯ
“ಭಾರತಕ್ಕೆ ಬೇಕಾಗಿರುವ ಶಂಕಿತನೊಬ್ಬ ವಿಮಾನದಲ್ಲಿದ್ದಾನೆ ಎಂದು ಚೆನ್ನೈ ಪ್ರದೇಶ ನಿಯಂತ್ರಣ ಕೇಂದ್ರದಿಂದ ಬಂದ ಎಚ್ಚರಿಕೆಯ ನಂತರ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಈ ಶೋಧ ನಡೆಸಲಾಯಿತು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆ ವಿಮಾನವನ್ನು ಪರಿಶೀಲಿಸಲಾಯಿತು. ನಂತರ ಮುಂದಿನ ಕಾರ್ಯಾಚರಣೆಗಳಿಗೆ ಅನುಮತಿ ನೀಡಲಾಯಿತು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.