ಬೆಂಗಳೂರು : ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಪಾಕಿಸ್ತಾನದ ಜೊತೆ ಯುದ್ದ ಮಾಡುವೆ, ಹೂಮನ್ ಬಾಂಬ್ ದಾಳಿ ಮಾಡಿಕೊಳ್ಳುವೆ ಎಂದು ಹೇಳಿಕೆ ನೀಡಿದ ಜಮೀರ್ ಅಹಮ್ಮದ್ ಹೇಳಿಕೆಗೆ ಮಾಜಿ ಸಿಎಂ ಸದಾನಂದ ಗೌಡ ವಾಗ್ದಾಳಿ ನಡೆಸಿದ್ದು. ‘ಜಮೀರ್ ಪಾಕಿಸ್ತಾನಕ್ಕೆ ಹೋಗೊದು ಬೇಡ, ಅವರ ಕ್ಷೇತದಲ್ಲೇ ಆತ್ಮಾಹುತಿ ಬಾಂಬ್ ದಾಳಿ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಜಮೀರ್ ಅಹಮ್ಮದ್ ‘ ಜಮೀರ್ ಮಾತು ಯಕ್ಷಗಾನದಲ್ಲಿ ಬರೋ ಹಾಸ್ಯಗಾರನಿಗಿಂತಲೂ ಕೆಳಗಿನದು, ಅವರ ಮಾತು ಕೇವಲ ಹಾಸ್ಯಸ್ಪದವಾಗಿರುತ್ತೆ, ಅವರು ಮೆಚ್ಚಿಸೋಕೆ ಈ ರೀತಿ ಮಾತಾಡುತ್ತಿದ್ದಾರೆ. ಅವರು ಪಾಕಿಸ್ತಾನಕ್ಕೆ ಹೋಗಿ ಆತ್ಮಾಹುತಿ ಬಾಂಬ್ ಬ್ಲಾಸ್ಟ್ ಮಾಡುವುದು ಬೇಡ.
ಇಲ್ಲಿಯೇ ಅವರ ಕ್ಷೇತ್ರದಲ್ಲೇ ಆತ್ಮಾಹುತಿ ಮಾಡಿಕೊಳ್ಳಲಿ. ಈ ಮೂಲಕ ಪಾಕಿಸ್ತಾನದ ನಡೆಯನ್ನ ವಿರೋಧಿಸುವ ಸಂದೇಶ ಜಗತ್ತಿಗೆ ಕೊಡಲಿ ಎಂದು ಹೇಳಿದರು. ಇದನ್ನೂ ಓದಿ :‘ಉಗ್ರ ದಾಳಿಗೆ ಕನ್ನಡ ಕಾರಣ’ ಎಂದಿದ್ದ ಗಾಯಕ ಸೋನು ನಿಗಮ್ ವಿರುದ್ದ FIR ದಾಖಲು
ಸುಹಾಸ್ ಶೆಟ್ಟಿ ಹತ್ಯೆ ಕುರಿತು ಸದಾನಂದ ಗೌಡರ ಮಾತು..!
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಕುರಿತು ಮಾತನಾಡಿದ ಡಿ.ವಿ ಸದಾನಂದ ಗೌಡರು ‘ ಸುಹಾಸ್ ಶೆಟ್ಟಿ ಬೇರೊಂದು ಕೇಸ್ನಲ್ಲಿ ಭಾಗಿಯಾಗಿದ್ದ. ಅವನು ಜೈಲಿನಿಂದ ಹೊರ ಬಂದ ಮೇಲೆ ಥ್ರೆಟ್ ಇತ್ತು. ಅವನಿಗೆ ರಕ್ಷಣೆ ಕೊಡಬೇಕಾಗಿತ್ತು, ಆದ್ರೆ ಅದನ್ನ ಅವರು ಮಾಡಲಿಲ್ಲ. ಹಿಂದೂ ಕಾರ್ಯಕರ್ತನಿಗೆ ರಕ್ಷಣೆ ಕೊಟ್ಟರೆ ಮುಸಲ್ಮಾನರಿಗೆ ಬೇಜಾರಾಗಬಾರದು ಎಂಬುದು ಸರ್ಕಾರದ ನಿಲುವು.
ಇದನ್ನೂ ಓದಿ :Viral Video: ಪ್ರೇಯಸಿ ಜೊತೆ ನೂಡಲ್ಸ್ ತಿನ್ನುತ್ತಿದ್ದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ಪೋಷಕರು
ಕಾಂಗ್ರೆಸ್ ನ ಓಲೈಕೆ ರಾಜಕಾರಣ ದುರದೃಷ್ಟಕರ. ದಕ್ಷಿಣಕನ್ನಡ, ಉಡುಪಿ ಭಾಗದಲ್ಲಿ ಎಲ್ಲಾ ಹಿಂದೂಗಳು ಬೀದಿಗೆ ಇಳಿದರೆ ಪರಿಸ್ಥಿತಿ ಏನಾಗಬಹುದು, ಒಮ್ಮೆ ಊಹಿಸಿ. ಸರ್ಕಾರ ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ಕೊಡುವುದಲ್ಲ, ಬಹುಸಂಖ್ಯಾತರಿಗೆ ಕೂಡಾ ಕೊಡಬೇಕು. ಎಸ್ಪಿಗೆ ಸಾರ್ವಜನಿಕ ಸಭೆಯಲ್ಲಿ ಹೊಡೆಯಲು ಹೋದ ಸಿದ್ದರಾಮಯ್ಯರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ಕಾಂಗ್ರೆಸ್ ನವರು ಸತ್ಯ ಹರಿಶ್ಚಂದ್ರನ ಮಕ್ಕಳಂತೆ ಮಾತನಾಡುತ್ತಾರೆ, ಆದರೆ ಮಾಡುವುದು ದುರ್ಯೋಧನನ ಕೆಲಸ ಎಂದು ಮಾಜಿ ಸಿಎಂ ಸದಾನಂದ ಗೌಡ ಹೇಳಿದರು.