ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನೇಮಕಾತಿಗೆ ಪರೀಕ್ಷೆ ನಡೆಸುವ ಕೆಪಿಎಸ್ಸಿ ಸಂಸ್ಥೆ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು. ತರಾತುರಿಯಲ್ಲಿ ಇಂದು(ಮೇ.03) ಕೆಪಿಎಸ್ಸಿ ಪರೀಕ್ಷೆ ನಡೆಸುತ್ತಿದೆ. ಅಷ್ಟೇ ಅಲ್ಲದೇ ಇನ್ನೂ ನೂರಾರು ವಿದ್ಯಾರ್ಥಿಗಳು ಹಾಲ್ಟಿಕೆಟ್ ಕೂಡ ಪಡೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 10 ಗಂಟೆಗೆ ಮೇನ್ಸ್ ಗೆಜೆಟೆಡ್ ಪ್ರೊಬೆಷನರಿ ಎಕ್ಸಾಂ ನಡೆಯುತ್ತಿದೆ. ಆದರೆ ಇನ್ನೂ ಹಲವಾರು ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ ಎಂಬ ಕೂಗು ಕೇಳಿಬಂದಿದೆ. KAT ನಲ್ಲಿ ಪಿಟಿಷಿಯನ್ ಹಾಕಿದವರಿಗೆ ಇನ್ನೂ ಹಾಲ್ ಟಿಕೆಟ್ ಸಿಗದಿದ್ದು, ಬರೋಬ್ಬರಿ 350 ಅಭ್ಯರ್ಥಿಗಳ ಭವಿಷ್ಯದ ಜೊತೆಗೆ ಕೆಪಿಎಸ್ಸಿ ಚೆಲ್ಲಾಟ ಆಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ತಡರಾತ್ರಿ 3 ಗಂಟೆಯವರೆಗೂ ಹಾಲ್ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಚೊಚ್ಚಲ ಮಗುವಿಗೆ ಚಂದದ ಹೆಸರಿಟ್ಟ ನಟಿ ಹರ್ಷಿಕಾ ಪೂಣಚ್ಚ ದಂಪತಿ
ಅಷ್ಟೇ ಅಲ್ಲದೇ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಭಾಷಾಂತರದ ಸಮಸ್ಯೆ ಇದ್ದ ಕಾರಣ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು.ಸೋಮವಾರ ಹೈ ಕೋರ್ಟ್ ಅಂತಿಮ ತೀರ್ಪು ನೀಡಲಿದೆ. ಈ ನಡುವೆಯೇ ಮೇನ್ಸ್ ಗೆಜೆಟೆಡ್ ಪ್ರೊಬೆಷನರಿ ಎಕ್ಸಾಂಗೆ ಮುಂದಾಗಿದೆ. ನಿನ್ನೆ ಸಂಜೆಯಿಂದ ಮೇನ್ಸ್ ಎಕ್ಸಾಂಗೆ ಹಾಲ್ ಟಿಕೆಟ್ ನೀಡಿ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. ಹೈಕೋರ್ಟ್ನಿಂದ ಆದೇಶ ಬರುವ ಮೊದಲೆ ಎಕ್ಸಾಂ ಮಾಡಲು ಮುಂದಾಗಿರುವ ಕೆಪಿಎಸ್ಸಿ ವಿರುದ್ದ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಗೋವಾದ ಶಿರ್ಗಾಂವ್ ದೇವಸ್ಥಾನದಲ್ಲಿ ಕಾಲ್ತುಳಿತ: 6 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ
ಅಭ್ಯರ್ಥಿಗಳ ಮುಂದೆಯೇ ಹಾಲ್ಟಿಕೆಟ್ ಪ್ರಿಂಟ್ ಮಾಡಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು. ಕೇವಲ ಹೆಸರು, ಪೋಟೊ ಕೇಳಿ ಅಲ್ಲೇ ಹಾಲ್ ಟಿಕೆಟ್ ಪ್ರಿಂಟ್ ಮಾಡಿಕೊಟ್ಟಿದ್ದಾರೆ, ಹಾಲ್ಟಿಕೆಟ್ನಲ್ಲಿ ಕ್ಯೂಆರ್ ಕೋಡ್ ಇಲ್ಲದಿರುವುದು ಕೆಪಿಎಸ್ಸಿ ಮೇಲೆ ಅನುಮಾನಕ್ಕೆ ಕಾರಣವಾಗಿದೆ.