Sunday, May 4, 2025

‘ಕನ್ನಡಿಗರು ಬಹಳ ಒಳ್ಳೆಯವರು’: ವಿವಾದದ ಬಳಿಕ ಬೆಣ್ಣೆ ಹಚ್ಚಿದ ಸೋನು ನಿಗಮ್​

ಖ್ಯಾತ ಗಾಯಕ ಸೋನು ನಿಗಮ್​ ಇತ್ತೀಚೆಗೆ ಬೆಂಗಳೂರಿನ ಶೋ ಒಂದರಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ‘ಕನ್ನಡ.. ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್​ನಲ್ಲಿ ದಾಳಿ ಆಯಿತು’ ಎಂಬರ್ಥ ಬರುವಂತೆ ಅವರು ಮಾತನಾಡಿದ್ದರು. ಈ ಹೇಳಿಕೆ ನೀಡಿದ್ದ ಅವರ ವಿರುದ್ದ ಅವಲಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಅವರು ಈ ವಿವಾದದ ಬಗ್ಗೆ ಮೌನ ಮುರಿದಿದ್ದು. ಕಾರ್ಯಕ್ರಮ ನಡೆದ ಆ ದಿನಾ ಏನಾಯಿತು ಎಂಬುದನ್ನು ವಿವರಿಸಿದ್ದಾರೆ.

ಈ ಕುರಿತು ಸೋನು ನಿಗಮ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು. ‘ಕನ್ನಡ.. ಕನ್ನಡ’ ಎಂದು ಪ್ರೀತಿಯಿಂದ ಕರೆಯುವುದಕ್ಕೂ ‘ಕನ್ನಡ.. ಕನ್ನಡ’ ಎಂದು ಧಮ್ಕಿ ಹಾಕುವುದಕ್ಕೂ ವ್ಯತ್ಯಾಸ ಇದೆ. ಕಾರ್ಯಕ್ರಮ ನಡೆದ ಆ ದಿನ ವೇದಿಕೆ ಕೆಳಗೆ ನಾಲ್ಕೈದು ಜನರು ಗುಂಡಾಗಳು ಇದ್ದರು, ಅವರು ಕೂಗಾಡುತ್ತಿದ್ದರು. ಅವರು ತುಂಬಾನೇ ತೊಂದರೆ ಮಾಡುತ್ತಿದ್ದರು. ಪಹಲ್ಗಾಮ್​ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಿಲ್ಲ ಎಂಬುದನ್ನು ಅವರಿಗೆ ಹೇಳೋದು ಅನಿವಾರ್ಯವಾಗಿತ್ತು’ ಅದಕ್ಕೆ ಈ ರೀತಿ ಹೇಳಬೇಕಾಯ್ತು ಎಂಬರ್ಥದಲ್ಲಿ ಸೋನು ನಿಗಮ್​ ಹೇಳಿದ್ದಾರೆ. ಇದನ್ನೂ ಓದಿ :‘ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು’; ಮಾಜಿ ಪ್ರೇಯಸಿಯ ಮೇಲೆ ಆ್ಯಸಿಡ್​ ಎರಚಿದ ದುಷ್ಕರ್ಮಿ

 

View this post on Instagram

 

A post shared by Sonu Nigam (@sonunigamofficial)

ಮುಂದುವರಿದು ಮಾತನಾಡಿದ ಸೋನು ನಿಗಮ್​ ‘ಯಾವುದೇ ರಾಜ್ಯಕ್ಕೆ ಹೋದರು ಈ ರೀತಿ ಕೆಟ್ಟವರು ನಾಲ್ಕೈದು ಜನರು ಇರುತ್ತಾರೆ. ಜಗತ್ತು ಪ್ರೀತಿಯಿಂದ ನಿಮ್ಮ ಜೊತೆ ನಡೆದುಕೊಳ್ಳುವಾಗ ನೀವು ಹಾಡಬೇಕು ಎಂದು ಯಾರೊಬ್ಬರೂ ಬೆದರಿಕೆ ಹಾಕಬಾರದು. ನಾನು ಯಾವಾಗಲೂ ಕನ್ನಡ ಹಾಡನ್ನು ಹಾಡಲು ರೆಡಿ ಆಗಿ ಬಂದಿರುತ್ತೇವೆ. ಇದನ್ನು ಅನೇಕ ಬಾರಿ ಹೇಳಿದ್ದೇನೆ. ಆದರೆ, ಈ ರೀತಿ ಕೆಟ್ಟದನ್ನು ಮಾಡುವವರು ಯಾರೇ ಆದರೂ ಅಲ್ಲಿಯೇ ತಡೆಯಬೇಕು’ ಎಂದು ಹೇಳಿದ್ದಾರೆ ಸೋನು ನಿಗಮ್.

ಇದನ್ನೂ ಓದಿ :ಚೆನೈ ಮೂಲಕ ಶ್ರೀಲಂಕಾಗೆ ಪರಾರಿಯಾದ್ರ ಪಹಲ್ಗಾಮ್​ ಉಗ್ರರು? ಕೊಲಂಬೋ ವಿಮಾನ ನಿಲ್ದಾಣದಲ್ಲಿ ಶೋಧ

‘ನಾನು ಮೊದಲ ಹಾಡು ಹೇಳುವಾಗ ಆ ನಾಲ್ಕು ಜನ ನನ್ನನ್ನೇ ಗುರಾಯಿಸುತ್ತಾ, ಹಾಡು ಹೇಳು ಎಂದು ಬೆದರಿಕೆ ಹಾಕುತ್ತಿದ್ದರು. ಎಲ್ಲಾ ಕನ್ನಡಿಗರೂ ಹೀಗೆ ಎಂದುಕೊಳ್ಳಬೇಡಿ. ಕನ್ನಡಿಗರು ಸಾಕಷ್ಟು ಒಳ್ಳೆಯವರು’ ಎಂದು ಸೋನು ನಿಗಮ್ ಅವರು ಅಂದಿನ ಘಟನೆ ವಿವರಿಸಿದ್ದಾರೆ.

RELATED ARTICLES

Related Articles

TRENDING ARTICLES