Sunday, May 4, 2025

ಗೋವಾದ ಶಿರ್ಗಾಂವ್‌​​​ ದೇವಸ್ಥಾನದಲ್ಲಿ ಕಾಲ್ತುಳಿತ: 6 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಪಣಜಿ: ಗೋವಾದ ಶಿರಗಾವ್‌ ದೇವಸ್ಥಾನದಲ್ಲಿ ನಡೆದ ಲೈರೈ ದೇವಿ ಜಾತ್ರೆ ಮೆರವಣಿಗೆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಆರು ಜನ ಸಾವನ್ನಪ್ಪಿದ್ದು. 50ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ.

ಗೋವಾದ ಶಿರ್ಗಾಂವ್‌​​ ಗ್ರಾಮದಲ್ಲಿ ಲೈರೈ ದೇವಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆದಿತ್ತು. ಶತಮಾನಗಳಷ್ಟು ಹಳೆಯದಾದ ದೇವಸ್ಥಾನದ ಆಚರಣೆಗಳನ್ನು ನೋಡಲು ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ವ್ಯಕ್ತಿಯೋರ್ವ ದೇವಸ್ಥಾನದ ಇಳಿಜಾರಿನಲ್ಲಿ ಕಾಲು ಜಾರಿ ಉರುಳಿ ಬಿದ್ದಿದ್ದಾನೆ. ಇದು ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ :‘ಮೋದಿ ಅವಕಾಶ ಕೊಟ್ಟರೆ ನಾನು ಯುದ್ದಕ್ಕೆ ಹೋಗುತ್ತೇನೆ’: ಪಾಕ್​ ವಿರುದ್ದ ಕದನಕ್ಕೆ ಇಳಿದ ಜಮೀರ್​​

ಘಟನೆ ಬಗ್ಗೆ ತಿಳಿದ ಕೂಡಲೇ ತುರ್ತು ಸೇವೆಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:‘ಪರೀಕ್ಷೆ ಒಂದೇ ಜೀವನವಲ್ಲ’: ಫೇಲ್​ ಆದ ಮಗನಿಗೆ ಕೇಕ್​ ತಿನ್ನಿಸಿ ಧೈರ್ಯ ತುಂಬಿದ ತಂದೆ

ಇನ್ನು ಘಟನೆ ಬಗ್ಗೆ ಸಿಎಂ ಪ್ರಮೋದ್ ಸಾವಂತ್​ ಮಾಡುವ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ. ಇಂದು ಬೆಳಿಗ್ಗೆ ಶಿರ್ಗಾಂವ್‌ನ ಲೈರೈ ಜತ್ರಾದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತದಿಂದ ತೀವ್ರ ದುಃಖಿತನಾಗಿದ್ದೇನೆ.  ನಾನು ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದ್ದು, ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದೇನೆ. ಅಗತ್ಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

RELATED ARTICLES

Related Articles

TRENDING ARTICLES