Saturday, May 3, 2025

SSLC ಪರೀಕ್ಷೆ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ, ಉಡುಪಿ ಟಾಪ್​, ಕಲಬುರಗಿ ಲಾಸ್ಟ್​

ಬೆಂಗಳೂರು : 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು. ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಎಸ್ಎಸ್​ಎಲ್​ಸಿ ಫಲಿತಾಂಶದ ಕುರಿತು ಮಾಹಿತಿ ನೀಡಿದರು.

ಈ ಬಾರಿಯ ಎಸ್​ಎಸ್​ಎಲ್​ಸಿ ಒಟ್ಟು ಫಲಿತಾಂಶ 66.1ರಷ್ಟಿದ್ದು. ಕಳೆದ ಭಾರಿಗಿಂತ ಈ ಬಾರಿ ಶೇಕಡಾ 8%ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಪರೀಕ್ಷೆ ಬರೆದಿದ್ದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡಾ 70%ರಷ್ಟು ವಿದ್ಯಾರ್ಥಿಗಳು ಫಸ್ಟ್​ ಕ್ಲಾಸ್​ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು. 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಇದನ್ನೂ ಓದಿ :ಸುಹಾಸ್​ ಶೆಟ್ಟಿ ಹತ್ಯೆಯಲ್ಲಿ ಪೊಲೀಸ್​ ಇಲಾಖೆಯ ಕೈವಾಡ: ಆರ್​. ಅಶೋಕ್​

ಜಿಲ್ಲಾವಾರು ಫಲಿತಾಂಶ ಗಮನಿಸಿದರೆ ಪ್ರತಿ ಭಾರಿಯಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ 91.12% ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಇನ್ನು ಉಡುಪಿ 89.96% ಫಲಿತಾಂಶದೊಂದಿಗೆ ಎರಡನೇ ಸ್ಥಾನ ಮತ್ತು 83.13% ಫಲಿತಾಂಶದೊಂದಿಗೆ ಉತ್ತರಕನ್ನಡ ಮೂರನೇ ಸ್ಥಾನ ಪಡೆದಿದೆ. ಶೇ. 42.43 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.

ಪ್ರತಿಬಾರಿಯಂತೆ ಈ ಬಾರಿಯೂ ಹೆಣ್ಣುಮಕ್ಕಳ ಮೇಲಯಗೈ ಸಾಧಿಸಿದ್ದು.ಹೆಣ್ಣುಮಕ್ಕಳು-74% ಫಲಿತಾಂಶ ಪಡೆದಿದ್ದರೆ. ಗಂಡು ಮಕ್ಕಳು- 58.07% ಫಲಿತಾಂಶ ಪಡೆದಿದ್ದಾರೆ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ನೋಡುವುದಾದರೆ. 22 ವಿದ್ಯಾರ್ಥಿಗಳು 625/625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ. 65 ವಿದ್ಯಾರ್ಥಿಗಳು  624 ಅಂಕ ಪಡೆದಿದ್ದು. 108 ವಿದ್ಯಾರ್ಥಿಗಳು 623 ಅಂಕ ಮತ್ತು 189 ವಿದ್ಯಾರ್ಥಿ 622 ಅಂಕ ಪಡೆದಿದ್ದಾರೆ.

ಇದನ್ನೂ ಓದಿ :ಶಿಸ್ತು ಉಲ್ಲಂಘನೆ ಮಾಡಲ್ಲ, ವಾಪಾಸ್​ ಪಕ್ಷಕ್ಕೆ ಬರುತ್ತೇನೆ: ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್​ ಪತ್ರ

ಇದೇ ಮಾರ್ಚ್‌-ಏಪ್ರಿಲ್‌ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆದಿತ್ತು. ಮಾ.21ರಿಂದ ಏ.4 ರ ವರೆಗೆ ರಾಜ್ಯಾದ್ಯಂತ 2,818 ಕೇಂದ್ರಗಳಲ್ಲಿ 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷಾ ಅಕ್ರಮ ತಡೆಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕಳೆದ ಸಾಲಿನಲ್ಲಿ ನೀಡಿದ್ದ ಶೇ.10 ರಷ್ಟು ಹೆಚ್ಚುವರಿ ಗ್ರೇಸ್‌ ಅಂಕ ವ್ಯವಸ್ಥೆಯನ್ನು ಈ ಬಾರಿ ಕೈಬಿಡಲಾಗಿದೆ.

 

RELATED ARTICLES

Related Articles

TRENDING ARTICLES