ಬೆಂಗಳೂರು : ಖಾಸಗಿ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಗಾಯಕ ಸೋನು ನಿಗಮ್ ಕನ್ನಡ ಹಾಡು ಹಾಡಿ ಎಂದು ಕೇಳಿದ್ದಕ್ಕೆ ‘ಕನ್ನಡ, ಕನ್ನಡ ಎಂದು ಹೇಳಿದ್ದಕ್ಕೆ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯಾಗಿದೆ ಎಂದು ಹೇಳಿದರು. ಈ ಹೇಳಿಕೆಗೆ ಕರವೇ ನಾರಯಣಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು. ಸೋನು ನಿಗಮ್ರನ್ನು ಸಾಂಸ್ಕೃತಿಕ ಭಯೋತ್ಪಾದಕ ಎಂದು ಹೇಳಿದ್ದಾರೆ.
ಸೋನು ನಿಗಮ್ ವಿವಾದ..!
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದರು. ಆದರೆ ವೇಳೆ ತಾವು ಹಾಡುತಿದ್ದ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್ ‘ಕನ್ನಡ.. ಕನ್ನಡ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಹಿಂದೆಯೂ ಕೂಡ ಕನ್ನಡ ಹಾಡು ಹಾಡಲ್ಲ ಎಂದು ಹೇಳಿದ್ದರು. ಇದನ್ನೂ ಓದಿ :ಶಶಿ ತರೂರ್ ಜೊತೆ ಮೋದಿ: ‘ಕೆಲವರ ನಿದ್ದೆಗೆ ಭಂಗ ತರಲಿದೆ’ ಎಂದು ಕಾಂಗ್ರೆಸ್ಗೆ ಮೋದಿ ಟಾಂಗ್
ಸೋನು ನಿಗಮ್ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ..!
ಸೋನು ನಿಗಮ್ ಅವರ ಹೇಳಿಕೆಗೆ ಇದೀಗ ಕರವೇ ನಾರಯಣ ಗೌಡ ಆಕ್ರೋಶ ಹೊರಹಾಕಿದ್ದು. ‘ಸೋನು ನಿಗಮ್ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ, ಕನ್ನಡ ನಾಡಿಗೆ ಇಂತಹ ಭಯೋತ್ಪಾದಕ ಮತ್ತೆಂದು ಬರಬಾರದು. ಕನ್ನಡ ಚಿತ್ರರಂಗದ ನಿರ್ಮಾಪಕರು ಕೂಡ ಈ ಕುರಿತು ಎಚ್ಚೆತ್ತುಕೊಳ್ಳಬೇಕು. ಸೋನು ನಿಗಮ್ ಕನ್ನಡಲ್ಲಿ ಹಾಡು ಹೇಳಿದ್ರೆ ನಾವು ಅಂತಹ ಸಿನಿಮಾಗಳನ್ನ ಬ್ಯಾನ್ ಮಾಡಿಸುತ್ತೇವೆ. ಅಷ್ಟೇ ಅಲ್ಲದೇ ಸೋನು ನಿಗಮ್ ವಿರುದ್ದ ದೂರು ದಾಖಲಿಸುತ್ತೇವೆ ಎಂದು ಕರವೇ ನಾರಯಣ ಗೌಡ ಹೇಳಿದರು.