Saturday, May 3, 2025

ಶಿವಾನಂದ ಪಾಟೀಲ್ ಕೊಟ್ಟ​ ರಾಜೀನಾಮೆ ಅನರ್ಹ, ಇದನ್ನ ಸ್ವೀಕರಿಸಲ್ಲ: ಯು,ಟಿ ಖಾದರ್​

ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಸವಾಲನ್ನು ಸ್ವೀಕರಿಸಿದ್ದ ಶಾಸಕ ಶಿವಾನಂದ ಪಾಟೀಲ್​ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಈ ರಾಜೀನಾಮೆ ಅಸೆಂಬ್ಲಿ ನಿಯಮಗಳ ಅನುಸಾರ ಈ ರಾಜೀನಾಮೆ ಅಂಗೀಕರಿಸಿಲ್ಲ ಎಂದು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಸ್ಪೀಕರ್ ಯು,ಟಿ ಖಾದರ್​ರನ್ನು ಭೇಟಿಯಾಗಿದ್ದ ಶಿವಾನಂದ ಪಾಟೀಲ್​ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯತ್ನಾಳ್​ ಹಾಕಿದ್ದ ಸವಾಲನ್ನು ಸ್ವೀಕರಿಸಿ ಮತ್ತು ಯತ್ನಾಳ್ ನಡೆಸಿದ್ದ ವೈಯಕ್ತಿಕ ನಿಂದನೆಗೆ ರಾಜೀನಾಮೆ ನೀಡಿದ್ದೇನೆ. ಯತ್ನಾಳ್ ವಿರುದ್ದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು. ಆದರೆ ಸ್ಪೀಕರ್​ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಯತ್ನಾಳ್​ ರಾಜೀನಾಮೆ ನೀಡಿದ ನಂತರ ತನ್ನ ರಾಜೀನಾಮೆ ಅಂಗೀಕರಿಸಬೇಕೆಂದು ಕೋರಿ ಕೊಂಡಿದ್ದರು. ಇದನ್ನೂ ಓದಿ:ಯತ್ನಾಳ್ ಸವಾಲ್ ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಶಿವಾನಂದ ಪಾಟೀಲ್

ಆದರೆ ಸ್ಪೀಕರ್​ ಯು,ಟಿ ಖಾದರ್​ ಈ ರಾಜೀನಾಮೆಯನ್ನು ತಿರಸ್ಕರಿಸಿದ್ದು. ಈ ಕುರಿತು ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾದರ್ ‘ಶಿವಾನಂದ ಪಾಟೀಲ್ ನನ್ನನ್ನ ಭೇಟಿ‌ ಮಾಡಿ ತಮ್ಮ ರಾಜೀನಾಮೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಬಸವನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆ ಕೊಟ್ಟ ನಂತರ ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಷರತ್ತು ವಿಧಿಸಿದ್ದಾರೆ ಹಾಗೂ ಯತ್ನಾಳ್​ ವಿರುದ್ದ ಸ್ಪರ್ಧಿಸುತ್ತೇನೆ ಎಂದು ರಾಜೀನಾಮೆ ಸಲ್ಲಿಸಿದ್ದಾರೆ.

ಇದನ್ನೂ ಓದಿ :ಸುಹಾಸ್​ ಶೆಟ್ಟಿ ಅಂತ್ಯಕ್ರಿಯೆ: ಮೃತರ ಕುಟುಂಬಕ್ಕೆ 25ಲಕ್ಷ ಪರಿಹಾರ ಘೋಷಿಸಿದ ವಿಜಯೇಂದ್ರ

ಈ ರಾಜೀನಾಮೆ ಸದನದ ನಿಮಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ ಈ ರಾಜೀನಾಮೆ ಸ್ವೀಕರಕ್ಕೆ ಅರ್ಹವಲ್ಲ. ಹೀಗಾಗಿ ಶಿವಾನಂದ ಪಾಟೀಲರ ರಾಜೀನಾಮೆ ಅಂಗೀಕರಿಸಿಲ್ಲ ಎಂದು ಸ್ಪೀಕರ್​ ಯು.ಟಿ ಖಾದರ್​ ಹೇಳಿದರು.

RELATED ARTICLES

Related Articles

TRENDING ARTICLES