Sunday, May 25, 2025

ಸುಹಾಸ್​ ಶೆಟ್ಟಿ ಹತ್ಯೆಯಲ್ಲಿ ಪೊಲೀಸ್​ ಇಲಾಖೆಯ ಕೈವಾಡ: ಆರ್​. ಅಶೋಕ್​

ಬೆಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್​ ಶೆಟ್ಟಿ ಹತ್ಯೆಗೆ ಎಲ್ಲಡೆ ಆಕ್ರೋಶ ಕೇಳಿ ಬರುತ್ತಿದ್ದು. ಇದರ ನಡುವೆ ವಿಪಕ್ಷ ನಾಯಕ ಆರ್​.ಅಶೋಕ್​ ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಹಾಸ್​ ಶೆಟ್ಟಿ ಹತ್ಯೆಯಲ್ಲಿ ಪೊಲೀಸ್​ ಇಲಾಖೆಯ ಕೈವಾಡವಿದೆಯೇ ಎಂಬುದನ್ನ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಆರ್​.ಅಶೋಕ್​ ‘ಸುಹಾಸ್ ಶೆಟ್ಟಿ ಚಲನವಲನ ಬಗ್ಗೆ ಹಂತಕರಿಗೆ ಹೇಳಿದವರು ಯಾರು? ಇದರಲ್ಲಿ ಪೊಲೀಸ್ ಇಲಾಖೆ ಕೈವಾಡ ಇದೆಯಾ ಅಂತಲೂ ತನಿಖೆ ‌ನಡೆಯಬೇಕು. ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದೆ. ಸುಹಾಸ್ ಶೆಟ್ಟಿ ಬಳಿ ಯಾವುದೇ ಆಯುಧ ಇಲ್ಲ ಅಂತ ಗೊತ್ತಾಗಿ ದಾಳಿ ನಡೆದಿದೆ. ಈ ಮಾಹಿತಿ ಪಡೆದೇ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ :ಶಿಸ್ತು ಉಲ್ಲಂಘನೆ ಮಾಡಲ್ಲ, ವಾಪಾಸ್​ ಪಕ್ಷಕ್ಕೆ ಬರುತ್ತೇನೆ: ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್​ ಪತ್ರ

ಮುಂದುವರಿದು ಮಾತನಾಡಿದ ಆರ್​. ಅಶೋಕ್​ ‘ ನೇಹಾ ಹತ್ಯೆ ಆದಾಗ, ಲವ್ ಜಿಹಾದ್ ಆದಾಗ ಕಠಿಣ ಕ್ರಮ ತಗೋಬೇಕಿತ್ತು, ಆಗ ಕ್ರಮ ಕೈಗೊಳ್ಳದ ಹಿನ್ನೆಲೆ ಈ ರೀತಿ ಕೊಲೆಗಳಾಗ್ತಿವೆ. ನಾನು, ವಿಜಯೇಂದ್ರ ಮಂಗಳೂರಿಗೆ ಹೊರಟಿದ್ದೀವಿ. ಅಲ್ಲಿ ಪ್ರತಿಭಟನೆಯಲ್ಲಿ ನಾವೂ ಭಾಗವಹಿಸ್ತೇವೆ. ಸಿದ್ದರಾಮಯ್ಯ ಸಿಎಂ ಆದ ನಂತರ ಅವರ ನಡೆ ನುಡಿಯೇ ಬದಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ :‘ಕನ್ನಡ, ಕನ್ನಡ ಎಂದಿದ್ದಕ್ಕೆ ಪಹ್ಲಗಾಮ್ ದಾಳಿ ಆಯ್ತು’: ಇದೆಂತಾ ಹೇಳಿಕೆ ನೀಡಿದರು ಸೋನು ನಿಗಮ್​

ಬಿಜೆಪಿ ಬೆಂಕಿ ಸುರಿಯುವ ಕೆಲಸ ಮಾಡಬಾರದೆಂಬ ದಿನೇಶ್ ಗುಂಡೂರಾವ್ ಹೇಳಿಕೆಗೆ ಕಿಡಿಕಾರಿದ ಅಶೋಕ್
‘ದಿನೇಶ್ ಗುಂಡೂರಾವ್ ಆ ಸ್ಥಿತಿಯಲ್ಲಿ ಇದ್ದಾರೆ, ಅವರಿಗೆ ಪಾಕಿಸ್ತಾನ ನಮ್ಮನ್ನು ಬೈದರೂ ಏನೂ ಅನ್ಸಲ್ಲ, ಪಾಕ್ ಪರ ಘೋಷಣೆ ಕೂಗಿದ್ರೂ ಅವರಿಗೆ ಏನೂ ಅನ್ಸಲ್ಲ. ಆ ರೀತಿಯ ಎಮ್ಮೆ ಚರ್ಮದವರು ಅವರು.
ಇಡೀ ಪೊಲೀಸ್ ಇಲಾಖೆಯೇ ಕಾಂಗ್ರೆಸ್ ಪಾರ್ಟಿ ಥರ ಆಗಿದೆ. ಪೊಲೀಸರ ಕುಮ್ಮಕ್ಕಿನಿಂದಲೇ ಈಥರದ ಘಟನೆಗಳಾಗ್ತಿವೆ. ಪೊಲೀಸ್​ ಠಾಣೆಗಳು ಕಾಂಗ್ರೆಸ್​ ಕಛೇರಿಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES