Saturday, May 3, 2025

ಶಶಿ ತರೂರ್​ ಜೊತೆ ಮೋದಿ: ‘ಕೆಲವರ ನಿದ್ದೆಗೆ ಭಂಗ ತರಲಿದೆ’ ಎಂದು ಕಾಂಗ್ರೆಸ್​ಗೆ ಮೋದಿ ಟಾಂಗ್​

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿದ್ದು. ವಿಳಿಂಜಂ ಅಂತಾರಾಷ್ಟ್ರೀಯ ಬಂದರು ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಾಯಕ ಶಶಿ ತರೂರ್​ ಕೂಡ ಭಾಗವಹಿಸಿದ್ದು. ಪ್ರಧಾನಿ ಮೋದಿ ಶಶಿ ತರೂರ್​ ಕೈ ಕುಲುಕುವ ಮೂಲಕ ಮಾತನಾಡಿದರು. ಜೊತೆಗೆ ಇವತ್ತಿನ ಸಭೆ ಅನೇಕ ಜನರ ನಿದ್ರೆಗೆ ಭಂಗ ತರಲಿದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿ ತರೂರ್​ “ನಾನು ಮುಖ್ಯಮಂತ್ರಿಗಳಿಗೆ ಹೇಳಲು ಬಯಸುತ್ತೇನೆ, ನೀವು ಭಾರತ ಮೈತ್ರಿಕೂಟದ ಬಲವಾದ ಆಧಾರಸ್ತಂಭ, ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಹಲವಾರು ಜನರಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ನೀಡಲಿದೆ” ಎಂದು ಪ್ರಧಾನಿ ಮೋದಿ ಟೀಕಿಸಿದರು. ಇದನ್ನೂ ಓದಿ :ರಾಯಚೂರು, ಚಾಮರಾಜನಗರ ಜಿಲ್ಲಾಧಿಕಾರಿ ಕಛೇರಿಗಳಿಗೆ ಬಾಂಬ್​ ಬೆದರಿಕೆ..!

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ‘ಕೇರಳ ಜನರ ಪರವಾಗಿ, ಈ ಮಹತ್ವದ ಯೋಜನೆಯನ್ನು ರಾಷ್ಟ್ರಕ್ಕೆ ಅರ್ಪಿಸಲು ನಮ್ಮ ರಾಜ್ಯಕ್ಕೆ ಭೇಟಿ ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ಮತ್ತೊಮ್ಮೆ ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಕ್ಕಾಗಿ ಅದಾನಿ ಗ್ರೂಪ್‌ಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದು ಹೇಳಿದರು.

ಇದನ್ನೂ ಓದಿ:ಯತ್ನಾಳ್ ಸವಾಲ್ ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಶಿವಾನಂದ ಪಾಟೀಲ್

ಅಷ್ಟೇ ಅಲ್ಲದೇ ಗುರುವಾರ ರಾತ್ರಿ ಶಶಿ ತರೂರ್​ ಪ್ರಧಾನಿ ಮೋದಿಯನ್ನು ಸ್ವತಃ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿಕೊಂಡಿದ್ದು. ಇದರ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.

RELATED ARTICLES

Related Articles

TRENDING ARTICLES