ಬೆಂಗಳೂರು : ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ಕೇಂದ್ರ ಶಿಸ್ತು ಸಮಿತಿಗೆ ಪತ್ರ ಬರೆದಿದ್ದು. ಇನ್ನು ಮುಂದೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡಲ್ಲ ಎಂದು ಭರವಸೆ ನೀಡಿದ್ದಾರೆ.
ನಿರಂತರವಾಗಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಳೆದ ತಿಂಗಳು ಬಿಜೆಪಿಯ ಶಿಸ್ತು ಸಮಿತಿ ರೆಬಲ್ ಶಾಸಕ ಯತ್ನಾಳ್ರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಉಚ್ಚಾಟನೆಯ ನಂತರ ಯತ್ನಾಳ್ ಕೂಡ ಪಕ್ಷಕ್ಕೆ ವಾಪಾಸಾಗುವ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಪತ್ರ ಬರೆದು, ಭಿಕ್ಷೆ ಬೇಡಲ್ಲ ಎಂದು ಯತ್ನಾಳ್ ಹೇಳಿದ್ದರು. ಅಷ್ಟೇ ಅಲ್ಲದೇ ವಿಜಯ ದಶಮಿ ವೇಳೆಗೆ ನೂತನ ಪಕ್ಷ ಉದ್ಘಾಟನೆ ಮಾಡುವ ಬಗ್ಗೆಯೂ ಹೇಳಿಕೆ ನೀಡಿದ್ದರು, ಆದರೆ ಇದೀಗ ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವಂತೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ :‘ಕನ್ನಡ, ಕನ್ನಡ ಎಂದಿದ್ದಕ್ಕೆ ಪಹ್ಲಗಾಮ್ ದಾಳಿ ಆಯ್ತು’: ಇದೆಂತಾ ಹೇಳಿಕೆ ನೀಡಿದರು ಸೋನು ನಿಗಮ್
ಬಿಜೆಪಿಯಲ್ಲಿರುವ ರೆಬಲ್ ಶಾಸಕರ ಒತ್ತಡಕ್ಕೆ ಮಣಿದು ಯತ್ನಾಳ್ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದ್ದು. ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಸಿದ್ದೇಶ್ವರ್, ಕುಮಾರ್ ಬಂಗಾರಪ್ಪ ಮತ್ತಿತರ ಮಾತಿಗೆ ಮಣಿದ ಯತ್ನಾಳ್ ಕೇಂದ್ರ ಶಿಸ್ತು ಸಮಿತಿಗೆ ಪತ್ರ ಬರೆದಿದ್ದಾರೆ. ‘ಈ ಪತ್ರದಲ್ಲಿ ಹಿಂದೆ ಮಾಡಿರುವ ಶಿಸ್ತು ಉಲ್ಲಂಘನೆಗೆ ವಿಷಾದ ವ್ಯಕ್ತಪಡಿಸಿರುವ ಯತ್ನಾಳ್, ಇನ್ನು ಮುಂದೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡಲ್ಲ, ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಪತ್ರ ಬರೆದಿದ್ದರು.
ಇದನ್ನೂ ಓದಿ:ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಬಂದ್: ಬಸ್ ಸಂಚಾರ ಸ್ಥಗಿತ
ಈ ಕುರಿತು ಈಗಾಗಲೇ ರೆಬಲ್ ನಾಯಕರು ಮೌಖಿಕವಾಗಿ ಕೇಂದ್ರಕ್ಕೆ ಮನವಿ ಮಾಡಿದ್ದು. ಯತ್ನಾಳ್ರನ್ನು ಮರುಸೇರ್ಪಡೆ ಮಾಡಿಕೊಳ್ಳುವಂತೆ ವಿನಂತಿಸಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದ್ದು. ಯತ್ನಾಳ್ ಮತ್ತೆ ಪಕ್ಷಕ್ಕೆ ಮರಳುತ್ತಾರಾ ? ಯತ್ನಾಳ್ ಮನವಿಯನ್ನು ಕೇಂದ್ರ ಬಿಜೆಪಿ ಪುರಸ್ಕರಿಸುತ್ತದೆಯೇ ಎಂಬ ಪ್ರಶ್ನೆಗಳು ಉಧ್ಬವವಾಗಿವೆ.