ಬಾಗಲಕೋಟೆ : ಸರಿಯಾಗಿ ಸಾಂಬಾರ್, ಪಲ್ಯ ಮಾಡೋದಿಲ್ಲ ಎಂದು ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಸರಿಯಾಗಿ ಅಡುಗೆ ಮಾಡೋದಿಲ್ಲ ಎಂದು ಪ್ರೀತಿಸಿ ಮನೆಬಿಟ್ಟು ಬಂದಿದ್ದ ಪತ್ನಿಯನ್ನ ಪತಿರಾಯನೊಬ್ಬ ಕೊಲೆ ಮಾಡಿದ್ದಾನೆ. ಕೊಲೆಯಾದ ದುರ್ದೈವಿಯನ್ನು ಸಾಕ್ಷಿತಾ ಎಂದು ಗುರುತಿಸಿದ್ದು. ಕೊಲೆ ಮಾಡಿದ ಪತಿಯನ್ನು ಬೀರಪ್ಪ ವಾಳಕಿ ಎನ್ನಲಾಗಿದೆ
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ, ಮುಗಳಖೋಡ ಗ್ರಾಮದಲ್ಲಿ ಘಟನೆ ನಡೆದಿದೆ. ಬೀರಪ್ಪ ಮತ್ತು ಸಾಕ್ಷತ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರದ್ದು ಬೇರೆ ಜಾತಿಯಾಗಿದ್ದ ಕಾರಣ ಮನೆಯಲ್ಲಿ ಮದುವೆಗೆ ಒಪ್ಪಲ್ಲ ಎಂದು ಇಬ್ಬರು ಓಡಿ ಹೋಗಿದ್ದರು. ಆದರೆ ನಂತರ ಹಿರಿಯರು ಇಬ್ಬರನ್ನು ಕರೆತಂದು ಮದುವೆ ಮಾಡಿಸಿದ್ದರು. ಇದನ್ನೂ ಓದಿ:ಅನೈತಿಕ ಸಂಬಂಧ: ಪತ್ನಿ, ಪ್ರಿಯಕರನನ್ನು ಕೊಚ್ಚಿ ಕೊಲೆ ಮಾಡಿದ ಗಂಡ
ಇಬ್ಬರು ಸುಖವಾಗಿಯೇ ಜೀವನ ಸಾಗಿಸುತ್ತಿದ್ದರು. ಆದರೆ ಏಪ್ರೀಲ್ 30ರಂದು ಊಟ ಮಾಡುವ ವೇಳೆ ಪತಿ ಬೀರಪ್ಪ ಹೆಂಡತಿ ಸರಿಯಾಗಿ ಸಾಂಬರ್, ಪಲ್ಯ ಮಾಡಿಲ್ಲ ಎಂಬ ನೆಪದಲ್ಲಿ ಜಗಳ ತೆಗೆದಿದ್ದನು. ಈ ವೇಳೆ ಮಾತಿಗೆ ಮಾತು ಬೆಳೆದು ಪ್ರೀತಿಸಿದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ. ಕೆಳಗೆ ಬಿದ್ದ ಪತ್ನಿಯ ಮೇಲೆ ಕುಳಿತು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ :ಸೂಕ್ಷ್ಮ ಮಾಹಿತಿಯನ್ನ ಪಾಕ್ಗೆ ರವಾನಿಸುತ್ತಿದ್ದ ಐಎಸ್ಐ ಏಜೆಂಟ್ ಬಂಧನ
ಘಟನಾ ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.