Saturday, May 3, 2025

ಭೀಕರ ಅಪಘಾತ: ಆಂಬ್ಯುಲೆನ್ಸ್​ ಡಿಕ್ಕಿಯಾಗಿ ಓರ್ವ ಸಾ*ವು, ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು : ಓವರ್ ಸ್ಪೀಡಾಗಿ ಬಂದ ‌ಅಂಬ್ಯುಲೆನ್ಸ್​ ಒಂದು ನಿಯಂತ್ರಣ ಕಳೆದುಕೊಂಡು ಫುಟ್ ಪಾತ್ ವ್ಯಾಪಾರಿಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ದುರ್ದೈವಿಯನ್ನು ರಮೇಶ ಎಂದು ಗುರುತಿಸಿದ್ದು. ರಮೇಶ್ ತಾಯಿ ಕಳೆದ ಎರಡು ದಿನದ ಹಿಂದೆ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.

ನಿನ್ನೆ (ಮೇ.01) ಬೆಳಗ್ಗೆ ಸುಮಾರು 8.30ರ ಸಮಯ, ಶಾಂತಿ ನಗರ ಕಡೆಯಿಂದ‌ ಅಂಬ್ಯುಲೆನ್ಸ್ ಒಂದು ವೇಗವಾಗಿ ಲಕ್ಕಸಂದ್ರ ಕಡೆ ಬಂದಿದೆ. ವಿಲ್ಸನ್ ಗಾರ್ಡನ್ 9 ನೇ ಕ್ರಾಸ್ ಬಳಿ ಬಂದಾಗ ರಸ್ತೆಯಲ್ಲಿ ಕಂಟ್ರೋಲ್ ತಪ್ಪಿದ ಆ್ಯಂಬುಲೆನ್ಸ್​ ಬೀದಿ ವ್ಯಾಪಾರ ಮಾಡ್ತಿದ್ದ ಅಂಗಡಿ ಕಡೆ ನುಗ್ಗಿದೆ, ಅಲ್ಲೇ ನಿಂತಿದ್ದ ಮೂರ್ನಾಲ್ಕು ಜನಕ್ಕೆ ವಾಹನ ಡಿಕ್ಕಿಯಾಗಿದ್ದು ಮುಂದೆ ಇದ್ದ ಆಟೋಗೆ ಡಿಕ್ಕಿಯಾಗಿ ಆಂಬ್ಯುಲೆನ್ಸ್​ ನಿಂತುಕೊಂಡಿದೆ. ಇದನ್ನೂ ಓದಿ:ಸುಹಾಸ್​ ಶೆಟ್ಟಿ ಅಂತ್ಯಕ್ರಿಯೆ: ಮೃತರ ಕುಟುಂಬಕ್ಕೆ 25ಲಕ್ಷ ಪರಿಹಾರ ಘೋಷಿಸಿದ ವಿಜಯೇಂದ್ರ

ಈ ದುರ್ಘಟನೆಯಲ್ಲಿ ರಮೇಶ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದು. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತರ ಜನರು ಕೂಡ ಆಂಬ್ಯುಲೆನ್ಸ್​ ಚಾಲಕನಿಗೆ ಸಖತ್​ ಆಗಿ ಗೂಸಾ ಕೊಟ್ಟಿದ್ದಾರೆ. ಮೃತ ರಮೇಶ್​ ತಾಯಿ ಕಳೆದ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದು. ಅವರ ಕಾರ್ಯ ಮುಗಿಸುವುದರೊಳಗೆ ಮಗನೂ ಕೂಡ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಸಾಂಬಾರ್​ ವಿಷಯಕ್ಕೆ ಜಗಳ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಪರಲೋಕಕ್ಕೆ ಕಳುಹಿಸಿದ ಪತಿರಾಯ

ಘಟನೆ ಸಂಬಂಧ ‌ವಿಲ್ಸನ್ ಗಾರ್ಡನ್ ಸಂಚಾರಿ ಪೋಲಿಸ್ ಠಾಣೆಯಲ್ಲಿ ‌ದೂರು ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ. ಘಟನೆ ಏನು ಕಾರಣ ಅನ್ನೋದು ಪೋಲಿಸರ ‌ತನಿಖೆಯಿಂದ‌ ತಿಳಿದು ಬರಬೇಕಿದೆ.

RELATED ARTICLES

Related Articles

TRENDING ARTICLES