ನವದೆಹಲಿ : ಮಾನ್ಯ ಗೃಹಸಚಿವ ಅಮಿತ್ ಶಾ ಪಹಲ್ಗಾಮ್ನಲ್ಲಿ ನಡೆದಿರುವ ಉಗ್ರ ದಾಳಿಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದು. ‘ನಮಗಾದ ಪ್ರತಿ ನಷ್ಟಕ್ಕೂ ನಾವೂ ಪ್ರತಿಕಾರ ತೀರಿಸಿಕೊಳ್ಳುತ್ತೇವೆ. ಭಯೋತ್ಪಾದನೆ ವಿರುದ್ದ ಹೋರಾಟ ನಡೆಸುತ್ತಿರುವ ನಮ್ಮ ಜೊತೆ ಇಡೀ ವಿಶ್ವ ನಿಂತಿದೆ ಎಂದು ಹೇಳಿದರು.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೋಡೋಫಾ ಉಪೇಂದ್ರನಾಥ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಅಮಿತ್ ಶಾ ‘ಉಪೇಂದ್ರ ಶಾ ಅವರು ಅಸ್ಸಾಂನಲ್ಲಿ ಬೋಡೋ ಸಮುದಾಯದ ಉನ್ನತಿ ಮತ್ತು ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರನ್ನು ಇಂದು ಸ್ಮರಿಸೊಣ ಎಂದು ಹೇಳಿದರು.
ಇದನ್ನೂ ಓದಿ :ಮೋದಿ ಯಾವುದೇ ಸವಾಲನ್ನು ಎದುರಿಸಿ, ದೇಶಕ್ಕೆ ಕೀರ್ತಿ ತರುತ್ತಾರೆ : ರಜಿನಿ ಕಾಂತ್
ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಭಯೋತ್ಪಾದಕರಿಂದ ಆದ ಉಗ್ರದಾಳಿಯ ಬಗ್ಗೆ ಮಾತನಾಡಿದ ಅಮಿತ್ ಶಾ ಉಗ್ರರಿಗೆ ಕಠಿಣ ಎಚ್ಚರಿಕೆ ನೀಡಿದರು. “ಹೇಡಿತನದ ಕೃತ್ಯ ನಡೆಸುವುದು ಅವರ ದೊಡ್ಡ ಗೆಲುವು ತಿಳಿದಿರುವ ಉಗ್ರರು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕೂ. ಇಲ್ಲಿ ನರೇಂದ್ರ ಮೋದಿ ಸರ್ಕಾರವಿದೆ. ಇಲ್ಲಿ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅಮಿತ್ ಶಾ “ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಇದು ಕೇವಲ ಅವರ ಕುಟುಂಬಗಳ ದುಃಖವಲ್ಲ, ಇಡೀ ರಾಷ್ಟ್ರ ಅನುಭವಿಸುತ್ತಿರುವ ದುಃಖ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದನೆಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡುತ್ತೇನೆ.
ಇದನ್ನೂ ಓದಿ:ಪಕ್ಕದ ಮನೆಯವನಿಂದ ಲೈಂಗಿಕ ಕಿರುಕುಳ: ಅಪ್ರಾಪ್ತ ಬಾಲಕಿ ಆತ್ಮಹ*ತ್ಯೆ
ನಮಗೆ ಆಗಿರುವ ಪ್ರತಿ ನಷ್ಟಕ್ಕೂ ಪ್ರತಿಕಾರ ತೆಗೆದುಕೊಳ್ಳುತ್ತೇವೆ. ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದನೆಯನ್ನು ಬದುಕಲು ಬಿಡುವುದಿಲ್ಲ. ಭಯೋತ್ಪಾದನೆಯ ಬೇರುಗಳನ್ನು ನಿರ್ಮೂಲನೆ ಮಾಡುತ್ತೇವೆ. ಭಯೋತ್ಪಾದನೆ ವಿರುದ್ದ ಭಾರತ ನಡೆಸುತ್ತಿರುವ ಹೋರಾಟದ ಜೊತೆ ಜಾಗತಿಕ ಸಮುದಾಯ ಗಟ್ಟಿಯಾಗಿ ನಿಂತುಕೊಂಡಿದೆ ಎಂದು ಅಮಿತ್ ಶಾ ಹೇಳಿದರು.