ಬಳ್ಳಾರಿ: ಪಕ್ಕದ ಮನೆಯವನ ಮಾನಸಿಕ, ದೈಹಿಕ ಕಿರುಕುಳಕ್ಕೆ ನೊಂದು ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ತನ್ನ ಪಕ್ಕದ ಮನೆಯ ವ್ಯಕ್ತಿ ಸುರೇಶ ಎಂಬವನ ಹೆಸರನ್ನು ಡೆತ್ನೋಟ್ ನಲ್ಲಿ ಬರೆದಿಟ್ಟು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಭಂಗ ಮಾಡಿ, ಕಿರುಕುಳ ನೀಡಿದ್ದಾನೆ. ಅವನನ್ನು ಬಿಡಬೇಡಿ ಎಂದು ಅಪ್ರಾಪ್ತ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಘಟನೆ..!
ನಿನ್ನೆ ಬಾಲಕಿಯ ಪೋಷಕರು ಸಂಬಂಧಿಕರ ಮದುವೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ವ್ಯಕ್ತಿ ಬಾಲಕಿಯ ಮೇಲೆ ಎರಗಿದ್ದ ಎಂಬ ಆರೋಪ ಕೇಳಿ ಬಂದಿದೆ.ಸದ್ಯ ಆರೋಪಿ ಸುರೇಶನನ್ನು ತೋರಣಗಲ್ ಪೊಲೀಸರು ವಶಕ್ಕೆ ಪಡೆದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ :‘ಆಪರೇಷನ್ ಕಾಡಾನೆ ಸಕ್ಸಸ್’ ; ರೈತನನ್ನು ಬಲಿಪಡೆದಿದ್ದ ಕಾಡಾನೆಗೆ ಖೆಡ್ಡಾ ತೋಡಿದ ಅರಣ್ಯ ಇಲಾಖೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣು ಜಾತಿಯ ರಕ್ಷಣೆಗಾಗಿ ಹಲವಾರು ಕಾನೂನು ಜಾರಿಗೆ ತಂದ್ರು, ಮನುಷ್ಯ ಮೃಗವಾಗಿ ಬದಲಾಗುವುದು ಬಿಟ್ಟಿಲ್ಲ. ಈ ರೀತಿಯ ಕಾಮ ಕೃತ್ಯಗಳು ಮಾಡಿ ಹೆಣ್ಣನ್ನು ಬೋಗ ವಸ್ತುವಾಗಿ ನೋಡುವ ಕಾಮುಕರಿಗೆ ಶಿಕ್ಷೆಯಾಗಬೇಕು ಎನ್ನುವುದು ಪ್ರತಿಯೊಬ್ಬರ ವಾದ.