ನೆಲಮಂಗಲ : ಗ್ಯಾಸ್ ಲೀಕ್ ಆಗಿ ಮನೆ ಹೊತ್ತಿ ಉರಿದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದು. ಮೂವರ ಸ್ಥತಿ ಚಿಂತಾಜನಕವಾಗಿದೆ.
ಗಂಗಯ್ಯ ಎಂಬುವವರಿಗೆ ಸೇರಿದ್ದ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದ್ದು. ಈ ಎರಡು ಮನೆಗಳಲ್ಲಿ ಒಂದರಲ್ಲಿ ಬಳ್ಳಾರಿ ಮೂಲದ ನಾಗರಾಜ್ ಕುಟುಂಬ ವಾಸವಾಗಿತ್ತು. ಬೆಳಗ್ಗೆ ಕೆಲಸಕ್ಕೆ ತೆರಳುವಾಗ ನಾಗರಾಜ್ ದೇವರ ಮುಂದೆ ದೀಪ ಹಚ್ಚಿದ್ದರು. ಈ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಖಾಲಿಯಾಗಿದ್ದ ಕಾರಣ ನಾಗರಾಜ್ ಮಗ ಅಭಿಷೇಕ್ ಅದನ್ನು ಬದಲಿಸಲು ಮುಂದಾಗಿದ್ದನು. ಆದರೆ ಆಜಾಗರೂಕತೆಯಿಂದ ಸಿಲಿಂಡರ್ ಸರಿಯಾಗಿ ಫಿಟ್ ಆಗದೆ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿಯ ಕಾರಣ ಬೆಂಕಿ ಹೊತ್ತಿಕೊಂಡಿತ್ತು.
ಇದನ್ನೂ ಓದಿ :ವರದಕ್ಷಿಣೆ ಕಿರುಕುಳ: ಪತ್ನಿಗೆ ಅನ್ನ ನೀಡದೆ ಉಪವಾಸ ಸಾಯಿಸಿದ ಕ್ರೂರಿಗಳಿಗೆ ಜೀವಾವಧಿ ಶಿಕ್ಷೆ
ಘಟನೆಯಲ್ಲಿ ನಾಗರಾಜ್ (50) ಮತ್ತು ಶ್ರೀನಿವಾಸ್(50) ಸಜೀವ ದಹನವಾಗಿದ್ದರು. ಇನ್ನು ದುರ್ಘಟನೆಯಲ್ಲಿ ನಾಗರಾಜ್ ಪತ್ನಿ ಲಕ್ಷ್ಮಿ ದೇವಿ (35), ಮಕ್ಕಳಾದ ಬಸನಗೌಡ (19) ಅಭಿಷೇಕ್ ಗೌಡ (18) ಕೂಡ ಗಾಯಗೊಂಡಿದ್ದು. ಅವರನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.