ಬೆಳಗಾವಿ : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಕಪ್ಪುಬಟ್ಟೆ ತೋರಿಸಿ ಅಡ್ಡಿಪಡಿಸಿದ ಕುರಿತು ಮಾತನಾಡಿದ ಡಿಸಿಎಂ ಡಿಕೆಶಿ ‘ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಸಭೆ ಮಾಡಲು ಬಿಡಲ್ಲ, ಇದು ಕಾಂಗ್ರೆಸ್ನ ಶಪಥ ಎಂದು ಪ್ರತಿಜ್ಞೆ ಕೈಗೊಂಡರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಕಪ್ಪುಬಟ್ಟೆ ತೋರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅಲ್ಲಿದ್ದ ಪೊಲೀಸರ ಮೇಲೆ ಗರಂ ಆದರು. ಇದರ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ ‘ಬಿಜೆಪಿ ನಾಯಕರಿಗೆ ಹೇಳಲು ಬಯಸುತ್ತೇನೆ. ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೇ ಒಂದು ಸಭೆ ಮಾಡಲು ಬಿಡಲ್ಲ.ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ.
ಇದನ್ನೂ ಓದಿ:ಯತ್ನಾಳ್ ಪೈಗಂಬರ್ ಅವರ ಕಾಲಿನ ಧೂಳಿಗೂ ಸಮವಲ್ಲ: ವಿಜಯಾನಂದ ಕಾಶಪ್ಪನವರ್
ಇದೇ ವರ್ತನೆಯನ್ನು ಬಿಜೆಪಿ ಕಾರ್ಯಕರ್ತರು ಮುಂದುವರಿಸಿದರೆ ಹುಷಾರ್, ನಿಮಗಿಂತ ತುಂಬಾ ಚೆನ್ನಗಿ ಕಾರ್ಯರೂಪ ಮಾಡೋ ಶಕ್ತಿ ಜನ ನನಗೆ ಕೊಟ್ಟಿದ್ದಾರೆ. ಇದೇ ವರ್ತನೆಯನ್ನು ಮುಂದುವರಿಸಿದರೆ ಸರಿ ಇರಲ್ಲ. ಬಿಜೆಪಿ ಕಾರ್ಯಕರ್ತರಿಗೆ ಬುದ್ದಿವಾದ ಹೇಳಿದರೆ ಸರಿ, ಇದರು ವಾರ್ನಿಂಗ್ ಎಂದು ಡಿಕೆಶಿ ಹೇಳಿದರು.