ಫರಿದಾಬಾದ್ : ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಆಕೆಯ ಶವವನ್ನು ಮಂಚದ ಬಾಕ್ಸ್ನಲ್ಲಿ ಬಚ್ಚಿಟ್ಟಿದ್ದು. ಕೊಲೆ ಮಾಡಿದ ವಿಷಯವನ್ನು ತನ್ನ ಅಜ್ಜಿಗೆ ತಿಳಿಸಿದ್ದಾನೆ. ಇದನ್ನು ಆತನ ಅಜ್ಜಿ ಪೊಲೀಸರಿಗೆ ತಿಳಿಸಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸರನ್ ಪೊಲೀಸ್ ಠಾಣೆ ಪ್ರದೇಶದ ಜವಾಹರ್ ಕಾಲೋನಿಯಲ್ಲಿರುವ ಮನೆಯೊಂದರಲ್ಲಿ ಘಟನೆ ನಡೆದಿದ್ದು. ಮೃತ ಮಹಿಳೆ ಸೋನಿಯಾ (45) ಕಳೆದ 10 ವರ್ಷದಿಂದ ಜಿತೇಂದ್ರ ಎಂಬ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್ನಲ್ಲಿದ್ದಳು. ಆದರೆ ಜಿತೇಂದ್ರ ಆಕೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ಮಂಚದ ಬಾಕ್ಸ್ನಲ್ಲಿ ಮುಚ್ಚಿಟ್ಟಿದ್ದಾನೆ.
ಇದನ್ನೂ ಓದಿ:ಭಾರತದಲ್ಲಿ ಪಾಕಿಸ್ತಾನದ 16 ಪ್ರಮುಖ ಯೂಟ್ಯೂಬ್ ಚಾನೆಲ್ಗಳು ಬ್ಯಾನ್
ಕೊಲೆ ಮಾಡಿದ ನಂತರ ತನ್ನ ಅಜ್ಜಿಯ ಬಳಿಗೆ ಹೋಗಿ ಆ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಯುವಕನ ಅಜ್ಜಿ ಕೂಡಲೇ ಸರನ್ ಪೊಲೀಸರಿಗೆ ಮಾಹಿತಿ ನೀಡಿದ್ದಳು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮನೆಯ ಬೀಗ ಮುರಿದು ಒಳಗೆ ಹೋಗಿ, ಹಾಸಿಗೆಯಿಂದ ಶವವನ್ನು ಹೊರತೆಗೆದರು. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಆರೋಪಿ ಜಿತೇಂದ್ರನ ಸೈಕಲ್ ಮೇಲೆ ಬಟ್ಟೆ ಮಾರಾಟ ಮಾಡುತ್ತಿದ್ದು. ಕೆಲ ವರ್ಷಗಳ ಹಿಂದೆ ಆತನ ಪತ್ನಿ ಮರಣ ಹೊಂದಿದ್ದಳು. ಈತನಿಗೆ ಇಬ್ಬರು ಮಕ್ಕಳು ಇದ್ದರು. ಪತ್ನಿಯ ಮರಣದ ಜವಾಹರ್ ಕಾಲೋನಿಯ ಬದ್ಖಾಲ್ ಕಾಲೋನಿಯ ನಿವಾಸಿ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಪ್ರಾರಂಭಿಸಿದರು.
ಇದನ್ನೂ ಓದಿ :ವಿದ್ಯಾರ್ಥಿ ಮೊಬೈಲ್ನಲ್ಲಿ ನೂರಾರು ಸರಸ ಸಲ್ಲಾಪದ ವಿಡಿಯೋ: ಹಿಡಿದು ಥಳಿಸಿದ ಹಿಂದೂ ಕಾರ್ಯಕರ್ತರು