Saturday, August 30, 2025
HomeUncategorized63 ಸಾವಿರ ಕೋಟಿ ಮೌಲ್ಯದ 26 ರಫೇಲ್​ ಯುದ್ದ ವಿಮಾನ ಖರೀದಿಗೆ ಭಾರತ-ಫ್ರಾನ್ಸ್​​ ಒಪ್ಪಂದ

63 ಸಾವಿರ ಕೋಟಿ ಮೌಲ್ಯದ 26 ರಫೇಲ್​ ಯುದ್ದ ವಿಮಾನ ಖರೀದಿಗೆ ಭಾರತ-ಫ್ರಾನ್ಸ್​​ ಒಪ್ಪಂದ

ನವದೆಹಲಿ: ಭಾರತವು ಫ್ರಾನ್ಸ್‌ನಿಂದ 26 ರಫೇಲ್ ಮರೈನ್​ ಫೈಟರ್ ಜೆಟ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು. ಸುಮಾರು 63 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಈ ಒಪ್ಪಂದದ ಅನ್ವಯ 2031ರ ವೇಳೆಗೆ ಫ್ರಾನ್ಸ್​ ಯುದ್ದ ವಿಮಾನಗಳನ್ನು ಭಾರತಕ್ಕ ನೀಡಲಿದೆ.‘

ಭಾರತದಿಂದ ಫ್ರಾನ್ಸ್​ ಒಟ್ಟು 26 ರಫೇಲ್​ ಮರೈನ್​ ಯುದ್ದ ವಿಮಾನಗಳಿಗೆ ಬೇಡಿಕೆ ಇಟ್ಟಿದ್ದು. ಇದರಲ್ಲಿ 22 ಸಿಂಗಲ್​ ಸೀಟರ್​ ಜೆಟ್​ಗಳಿವೆ. ಉಳಿದ ನಾಲ್ಕು ವಿಮಾನಗಳು ಅವಳಿ ಆಸನಗಳನ್ನು ಹೊಂದಿದ್ದು. ಇವನ್ನು ತರಬೇತಿಗೆ ಎಮದು ಉಪಯೋಗಿಸಲಾಗುತ್ತದೆ. ಈ ಒಪ್ಪಂದವೂ ಯುದ್ದ ವಿಮಾನದ ನಿರ್ವಹಣೆ, ಲಾಜಿಸ್ಟಿಕ್​ ಬೆಂಬಲ ಮತ್ತು ಸಿಬ್ಬಂದಿಗಳ ತರಬೇತಿ ಸೇರಿದಂತೆ ಹಲವನ್ನು ಹೊಂದಿದೆ.

ಇದನ್ನೂ ಓದಿ :ಕಾಂಗ್ರೆಸ್​ ಸಮಾವೇಶದಲ್ಲಿ ಪ್ರತಿಭಟನೆ: ASP ಮೇಲೆ ಕೈ ಎತ್ತಿದ ಸಿಎಂ ಸಿದ್ದರಾಮಯ್ಯ

ರಫೇಲ್​ ಮರೈನ್​ ಜೆಟ್​ನ ವಿಶೇಷತೆಗಳು

ರಫೇಲ್ ಮರೈನ್​ ಜೆಟ್​ನ್ನು ವಿಶ್ವದ ಅತ್ಯಂತ ಮುಂದುವರಿದ ನೌಕಾ ಯುದ್ಧ ವಿಮಾನಗಳಲ್ಲಿ ಒಂದೆಂದು  ಪರಿಗಣಿಸಲಾಗಿದ್ದು. ಇದನ್ನು ಫ್ರೆಂಚ್ ನೌಕಪಡೆ ಮಾತ್ರ ಬಳಸುತ್ತಿದೆ. ಯುದ್ದ ವಿಮಾನಗಳ ಗುಂಪಿನಲ್ಲಿ ಈ ಯುದ್ದ ವಿಮಾನವನ್ನು ಸಫ್ರಾನ್​ ಗ್ರೂಪ್ಸ್​​ಗೆ ಸೇರಿಸಿದ್ದು. ಬಲವರ್ಧಿತ ಲ್ಯಾಂಡಿಗ್​ ಗೇರ್​ಗಳನ್ನು ಇದು ಹೊಂದಿದೆ. ಜೊತೆಗೆ ಮಡಿಸುವ ರೆಕ್ಕೆಗಳು ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಡೆಕ್ ಲ್ಯಾಂಡಿಂಗ್ ಮತ್ತು ಟೈಲ್‌ಹೂಕ್‌ಗಳನ್ನು ತಡೆದುಕೊಳ್ಳವ ಬಲವರ್ಧಿತ ಅಂಡರ್‌ಕ್ಯಾರೇಜ್ ಅನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ :ಕೊಪ್ಪಳ: ಬಾಲ್ಯ ವಿವಾಹಕ್ಕೆ ಬಂದು ಮುಜುಗರಕ್ಕೀಡಾದ ಹಾಲಿ ಶಾಸಕ ಮತ್ತು ಮಾಜಿ ಸಚಿವ

ಈ ಫೈಟರ್​ ಜೆಟ್​ನ್ನು ನೌಕಪಡೆಯ ಯುದ್ದ ವಿಮಾನ ವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯಗಳಲ್ಲಿ ನಿಯೋಜಿಸಲಾಗುವುದು, ಇದು ಸಮುದ್ರ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಹಿಂದೂ ಮಹಾಸಾಗರದಲ್ಲಿ ರಕ್ಷಣೆಯನ್ನು ಹೆಚ್ಚಿಸಲಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments