ಮಂಗಳೂರು : ಕರಾವಳಿಯಲ್ಲಿ ಮತ್ತೊಂದು ಜೂನಿಯರ್ ಪ್ರಜ್ವಲ್ ರೇವಣ್ಣ ಪತ್ತೆಯಾಗಿದ್ದು. ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬನ ಮೊಬೈಲ್ನಲ್ಲಿ ನೂರಾರು ಸರಸ ಸಲ್ಲಾಪದ ವಿಡಿಯೋ ಪತ್ತೆಯಾಗಿದೆ. ಆತನನ್ನು ಹಿಡಿದ ಹಿಂದೂ ಕಾರ್ಯಕರ್ತರು ಸರಿಯಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಘಟನೆ ನಡೆದಿದ್ದು. ಖಾಸಗಿ ಶಾಲೆಯ ವಿದ್ಯಾರ್ಥಿ ಸೈಯದ್ ಎಂಬಾತನನ್ನು ಹಿಡಿದು ಥಳಿಸಿದ್ದಾರೆ. ವಿದ್ಯಾರ್ಥಿ ಮತ್ತು ಕಬ್ಬಡ್ಡಿ ಆಟಗಾರನಾಗಿದ್ದ ಸೈಯದ್ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು. ವಿದ್ಯಾರ್ಥಿನಿಯರು/ ಯುವತಿಯರೊಂದಿಗಿನ ಅಸಭ್ಯ ವಿಡಿಯೋಗಳು ಪತ್ತೆಯಾಗಿವೆ.
ಇದನ್ನೂ ಓದಿ :ಮೆಡಿಕಲ್ ವೀಸಾ ಪಡೆದು ರಾಜ್ಯದಲ್ಲಿದ್ದ ಐವರು ಪಾಕ್ ಪ್ರಜೆಗಳ ಗಡಿಪಾರು
ವಿದ್ಯಾರ್ಥಿ ಸೈಯದ್ ಯುವತಿಯೊಬ್ಬಳಿಗೆ ಅಶ್ಲೀಲವಾಗಿ ಮೆಸೆಜ್ ಕಳಿಸಿ ಲೈಂಗಿಕ ಕಿರುಕುಳ ನೀಡಿದ್ದು. ಈ ವಿಷಯ ಹಿಂದು ಕಾರ್ಯಕರ್ತರಿಗೆ ತಿಳಿದು. ಸೈಯದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ಕಸಿದುಕೊಂಡು ಪರಿಶೀಲಿಸಿದಾಗ ಮೊಬೈಲ್ನಲ್ಲಿ ನೂರಾರು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಆರೋಪಿ ಸೈಯದ್ನನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದು. ಪೊಲೀಸರು ಆರೋಪಿ ವಿರುದ್ದ ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದಾರೆ.