ಕೊಪ್ಪಳ : ಬಾಲ್ಯವಿವಾಹ ತಡೆಗಟ್ಟಲು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದರು ಜನರು ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಕೊಪ್ಪಳದಲ್ಲಿ ನಡೆದಿರುವ ಬಾಲ್ಯವಿವಾಹಕ್ಕೆ ಹಾಲಿ ಶಾಸಕ ಹಾಗೂ ಮಾಜಿ ಸಚಿವರೊಬ್ಬರು ಮದುವೆಗೆ ಹಾಜರಾಗಿ ಮುಜುಗರಕ್ಕೊಳಗಾಗಿರುವ ಘಟನೆ ನಡದಿದೆ. ಒಂದೇ ವಾರದಲ್ಲಿ ಎರಡು ಬಾಲ್ಯವಿವಾಹ ಪ್ರಕರಣ ಬೆಳಕಿಗೆ ಬಂದಿದ್ದು ಅದು ಕೂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೊಬ್ಬರ ಸ್ವಕ್ಷೇತ್ರದಲ್ಲೇ ಎನ್ನುವುದು ವಿಪರ್ಯಾಸವೇ ಸರಿ.
ಕೊಪ್ಪಳದ ಕನಕಗಿರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ಇದೆ ತಿಂಗಳು 21ನೇ ತಾರೀಖಿಗೆ ನಡೆದ ಮದುವೆಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಶಾಸಕ ಗಣೇಶ ಹಾಗೂ ಜಿಲ್ಲೆಯ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿವೆ. ಖುದ್ದು ಗ್ರಾಪಂ ಸದಸ್ಯನೇ ಮುಂದೆ ನಿಂತು ಮಾಡಿರುವ ಬಾಲ್ಯ ವಿವಾಹ ಇದಾಗಿದ್ದು, ಅನೇಕ ಗಣ್ಯರು ಪಾಲ್ಗೊಂಡಿದ್ದಾರೆ. ಬಾಲ್ಯ ವಿವಾಹದ ಕುರಿತಂತೆ ಪ್ರಕರಣ ದಾಖಲಿಸದಂತೆ ಹಲವು ಜನಪ್ರತಿನಿಧಿಗಳು ಒತ್ತಡ ಹೇರಿದ್ದ ಆರೋಪ ಕೇಳಿ ಬಂದಿತ್ತು. ಹೀಗಾಗಿಯೇ ಬಾಲ್ಯ ವಿವಾಹವಾದ ಎರಡು ದಿನದ ಬಳಿಕ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ :ತಿಮ್ಮಾಪುರ್ ಚಡ್ಡಿ ಬಿಚ್ಚಿ ಚೆಕ್ ಮಾಡ್ಬೇಕು, ಸರ್ಕಾರದ ವಿರುದ್ದ ತೇಜಸ್ವಿ ಸೂರ್ಯ ಆಕ್ರೋಶ
ಇದರ ಬೆನ್ನಲ್ಲೇ ಕನಕಗಿರಿಯಲ್ಲಿ ಮತ್ತೊಂದು ಬಾಲ್ಯ ವಿವಾಹ ಪ್ರಕರಣ ಬೆಳಿಕಿಗೆ ಬಂದಿದೆ. ಹೌದು ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗದ್ದಿ ಕುಟುಂಬದವರಿಂದ ಅಪ್ರಾಪ್ತೆಯನ್ನು ಮದುವೆ ಮಾಡಿಕೊಂಡಿರುವ ಘಟನೆ ನೆಡದಿದೆ. ಈ ಮದುವೆಯೂ ಕೂಡ ಊರಿನ ಗುರುಹಿರಿಯರು ಸಮ್ಮುಖದಲ್ಲೇ ನಡದಿದೆ. ಇಲ್ಲಿ ಮದುವೆಯಲ್ಲಿ ಇನ್ನೊಂದು ಪ್ರಮುಖ ವಿಚಾರ ಇದೆ.
ಇದನ್ನೂ ಓದಿ :ಧರ್ಮ ಕೇಳಿ ಶೂಟ್ ಮಾಡಿದ್ದನ್ನ ನಾನ್ ನೋಡಿಲ್ಲ: ಪಲ್ಲವಿ ಬಿಗ್ ಟ್ವಿಸ್ಟ್
ಗದ್ದಿ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ACDPO ಆಗಿದ್ದಾರಂತೆ. ಬಾಲ್ಯವಿವಾಹ ತಡೆಗಟ್ಟುವ ಪ್ರಮುಖ ಇಲಾಖೆಯಲ್ಲೇ ಇದ್ದುಕೊಂಡು ತಮ್ಮ ಸಂಬಂಧಿಕರಿಗೆ ಈ ಕುರಿತು ಜಾಗೃತಿ ಮೂಡಿಸುವಲ್ಲಿ ವಿಫಲರಾದ್ರಾ ಅಥವಾ ಎಲ್ಲಾ ಗೊತ್ತಿದ್ದು ಸುಮ್ಮನಿದ್ರಾ ಎನ್ನುವ ಅನುಮಾನ ಮೂಡುತ್ತಿದೆ. ಇನ್ನೂ ಬಾಲ್ಯವಿವಾಹ ಕುರಿತು ದೂರಿನ ಹಿನ್ನೆಲೆ ಅಧಿಕಾರಿಗಳು ಭೇಟಿ ನೀಡಿ ಗದ್ದಿ ಕುಟುಂಬದವರಿಗೆ ನೋಟಿಸ್ ನೀಡಿದ್ದಾರೆ. ಅಪ್ರಾಪ್ತೆಯನ್ನು ಮಹಿಳಾ ಸಾಂತ್ವನ ಕೆಂದ್ರಕ್ಕೆ ಕಳಿಸಿ ಬಾಲ್ಯವಿವಾಹಕ್ಕೆ ಸಂಬಂಧಿಸಿದವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.