ಕರಾಚಿ : ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಸಂದರ್ಭದಲ್ಲಿ ಪಾಕಿಸ್ತಾನದ ರೈಲ್ವೇ ಸಚಿವ ಹನೀಫ್ ಅಬ್ಬಾಸಿ ಅವಿವೇಕಿತನದ ಮಾತನಾಡಿದ್ದು. ಭಾರತಕ್ಕೆ ಪರಮಾಣು ಬಾಂಬ್ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಪಾಕಿಸ್ತಾನ ಸಂಗ್ರಹಿಸಿರುವ ಎಲ್ಲಾ ಶಸ್ತ್ರಗಳು ನಿಮ್ಮ ಮೇಲೆ ಗುರಿಯಾಗಿವೆ ಎಂದು ಬೆದರಿಕೆ ಹಾಕಿದ್ದಾನೆ.
ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರ ಧಾಳಿಯ ನಂತರ ಭಾರತ ಮತ್ತು ಪಾಕ್ ನಡುವೆ ಯುದ್ದದ ಕಾರ್ಮೋಡ ಆವರಿಸಿದೆ. ಇದರ ನಡುವೆ ಪಾಕಿಸ್ತಾನದ ಸಚಿವ ಹನೀಫ್ ಅಬ್ಬಾಸಿ ಎಂಬಾತ ಭಾರತಕ್ಕೆ ಪರಮಾಣು ಬಾಂಬ್ನ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಪಾಕಿಸ್ತಾನ ಘೋರಿ, ಶಾಹೀನ್ ಮತ್ತು ಘಜ್ನಿ ಕ್ಷಿಪಣಿಗಳನ್ನು ಒಳಗೊಂಡಿದ್ದು. ಇವನ್ನು ಭಾರತಕ್ಕೆ ಮಾತ್ರ ಇರಿಸಿದ್ದೇವೆ ಎಂದು ಹೇಳಿ ತನ್ನ ಬಾಯಿ ಚಪಲ ತೀರಿಸಿಕೊಂಡಿದ್ದಾನೆ. ಇದನ್ನೂ ಓದಿ :ಭಾರತದಿಂದ ಜಲಬಾಂಬ್ ಅಸ್ತ್ರ: ಝೇಲಂ ನದಿ ನೀರು ಬಿಡುಗಡೆಯಿಂದ ಪಿಒಕೆಯಲ್ಲಿ ಪ್ರವಾಹ ಪರಿಸ್ಥಿತಿ
ಈ ಕುರಿತು ಮಾತನಾಡಿರುವ ಹನೀಫ್ ಅಬ್ಬಾಸಿ ‘ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಅಮಾನತು ಮಾಡಿದೆ. ಒಂದು ವೇಳೆ ನೀರು ನಿಲ್ಲಿಸಲು ಭಾರತ ಧೈರ್ಯ ತೋರಿದರೆ ಭಾರತ ಪೂರ್ಣ ಪ್ರಮಾಣದ ಯುದ್ದಕ್ಕೆ ಸಿದ್ದವಾಗಬೇಕೂ. ಪಾಕಿಸ್ತಾನ 130 ಪರಮಾಣು ಶಸ್ತ್ರಸ್ತಗಳನ್ನು ಪ್ರದರ್ಶನಕ್ಕೆ ನಿರ್ಮಿಸಿಲ್ಲ. ಅವುಗಳು ದೇಶಾಧ್ಯಂತ ಅಡಿಗಿಸಿ ಇಟ್ಟಿದೆ. ನಮ್ಮನ್ನು ಪ್ರಚೋದಿಸಿದರೆ ದಾಳಿ ಮಾಡಲು ಸಿದ್ದವಾಗಿವೆ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲದೆ ನಮ್ಮಲ್ಲಿರುವ ಶಾಹೀನ್, ಘೋರಿ, ಘಜ್ನಿ ಕ್ಷಿಪಣಿಗಳು ಪ್ರದರ್ಶನಕ್ಕೆ ಅಲ್ಲ. ನಾವು ದೇಶಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆಂದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಇವೆಲ್ಲವೂ ನಿಮ್ಮ ಮೇಲೆ ಗುರಿಯಾಗಿವೆ” ಎಂದು ತನ್ನ ಮೊಂಡುತನ ತೋರಿಸಿದ್ದಾನೆ.
ಇದನ್ನೂ ಓದಿ :ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿ: ಮಗಳ ಕಥೆ ಮುಗಿಸಿ ಕೃಷ್ಣ ನದಿಗೆ ಎಸೆದ ಅಪ್ಪ
26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಪ್ರತಿದಾಳಿಗಳ ಸರಣಿಯನ್ನು ಘೋಷಿಸಿದ ನಂತರ ಅವರ ಪ್ರತಿಕ್ರಿಯೆ ಬಂದಿದೆ. 1960 ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಭಾರತ ಘೋಷಿಸಿತು ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿತು.