Sunday, May 18, 2025

ಭಯೋತ್ಪಾದನೆಗೆ ಧರ್ಮವಿಲ್ಲ, ಪುರಾವೆ ಇಲ್ಲದೇ ಭಾರತ ನಮ್ಮನ್ನೂ ದೂಷಿಸುತ್ತಿದೆ: ಶಾಹಿದ್ ಆಫ್ರೀದಿ

ಇಸ್ಲಾಮಾಬಾದ್​ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿಕೆ ನೀಡಿದ್ದು. ‘ಭಾರತ ಪಾಕಿಸ್ತಾನವನ್ನು ದೂಷಿಸುವ ಬದಲು, ಘಟನೆ ಬಗ್ಗೆ ಪುರಾವೆಗಳನ್ನ ನೀಡಲಿ ಎಂದು ಹೇಳಿದ್ದಾನೆ. ಪಾಕಿಸ್ತಾನ ಭಯೋತ್ಪಾದನೆ ನಡೆಸುವುದು ಜಗತ್ತಿಗೆ ತಿಳಿದಿದ್ದರು. ಶಾಹಿದ್ ಆಪ್ರೀದಿ ಸಾಕ್ಷಿ ಕೇಳಿದ್ದಾರೆ.

ಪಾಕಿಸ್ತಾನದ ಸುದ್ದಿ ಪೋರ್ಟಲ್ ಮಿನಿಟ್ ಮಿರರ್​ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿನ್​ ಆಪ್ರೀದಿ ಹೇಳಿಕೆ ನೀಡಿದ್ದು. ‘ಯಾವುದೇ ಪುರಾವೆಗಳಿಲ್ಲದೆ ಭಾರತ ಪಾಕಿಸ್ತಾನವನ್ನು ದೂಷಿಸಲು ಮುಂದಾಗಿರುವುದು ಅತ್ಯಂತ ನಿರಾಶಾದಾಯಕವಾಗಿದೆ. ಇದನ್ನೂ ಓದಿ :ಪ್ರತಿಯೊಬ್ಬನ ರಕ್ತ ಕುದಿಯುತ್ತಿದೆ, ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ: ಮೋದಿ

ಇಂತಹ ಕ್ರಮಗಳು ಉದ್ವಿಗ್ನತೆಯನ್ನು ಹೆಚ್ಚಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಶಾಂತಿ ಪ್ರಯತ್ನಗಳಿಗೆ ಅಡ್ಡಿಯಾಗುತ್ತವೆ. ಭಾರತವು ಪರಸ್ಪರ ಆರೋಪ ಹೊರಿಸುವ ಬದಲು ಮಾತುಕತೆಗಳಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಮತ್ತು ಕ್ರಿಕೆಟ್ ಅನ್ನು ರಾಜಕೀಯದಿಂದ ದೂರವಿಡಬೇಕು ಎಂದು ಅಫ್ರಿದಿ ಹೇಳಿದ್ದಾರೆ.

ಇದನ್ನೂ ಓದಿ :‘ತಕ್ಷಣ ಯುದ್ದ ಬೇಡ ಅಂತ ಹೇಳಿದೆ ಅಷ್ಟೇ’: ವಿವಾದದ ಬಳಿಕ ಸ್ಪಷ್ಟನೆ ಕೊಟ್ಟ ಸಿಎಂ

ಪಹಲ್ಗಾಮ್​ನಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ ಆಪ್ರೀದಿ ”ಒಬ್ಬ ವ್ಯಕ್ತಿ ಯಾವುದೇ ಧರ್ಮಕ್ಕೆ ಸೇರಿದವನಾಗಿದ್ದರೂ, ಅವನು ಭಯೋತ್ಪಾದನೆಯನ್ನು ಬೆಂಬಲಿಸಲ್ಲ ಎಂದು ನಾನು ನಂಬುತ್ತೇನೆ. ಆದರೆ ಪಹಲ್ಗಾಮ್​ನಲ್ಲಿ ನಡೆದಿದ್ದು ವಿಷಾದದ ಸಂಗತಿ. ಇಂತಹ ಘಟನೆಗಳು ಪಾಕಿಸ್ತಾನದಲ್ಲೂ ನಡೆಯುತ್ತಿರುವುದು ದುಃಖಕರ ಸಂಗತಿ. ಈ ರೀತಿ ಘಟನೆಗಳು ನಡೆಯಬಾರದು. ನೆರೆಯ ರಾಷ್ಟ್ರಗಳು ಪರಸ್ಪರ ಉತ್ತಮ ಸಂಬಂಧ ಹೊಂದಿರಬೇಕು. ಹೋರಾಟದಿಂದ ಯಾವುದೇ ಫಲಿತಾಂಶವಿಲ್ಲ ಎಂದು ಶಾಹಿದ್​ ಆಫ್ರೀದಿ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES