Monday, April 28, 2025

‘ನೀನು ಬಂದು ಶರಣಾದರೆ ನಾವು ನೆಮ್ಮದಿಯಿಂದ ಬದುಕುತ್ತೇವೆ’: ಮನೆ ಕಳೆದುಕೊಂಡ ಉಗ್ರನ ತಾಯಿ ರೋಧನೆ

ಶ್ರೀನಗರ : ಪಹಲ್ಗಾಮ್‌ ಉಗ್ರ ದಾಳಿ ಬೆನ್ನಲ್ಲೇ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಹಲವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಭಯೋತ್ಪಾದಕರ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ಉಗ್ರ ಆದಿಲ್‌ ಹುಸೇನ್‌ ಥೋಕರ್‌ ಮನೆ ಕೂಡ ಧ್ವಂಸ ಮಾಡಲಾಗಿದೆ.

ಸುಮಾರು 7ಕ್ಕೂ ಹೆಚ್ಚು ಉಗ್ರರ ಮನೆಗಳನ್ನು ಇಲ್ಲಿಯವರೆಗೂ ನೆಲಸಮ ಮಾಡಿದ್ದು. ಭದ್ರತಾ ಪಡೆಗಳು ಐಇಡಿ ಬಳಸಿ ಮನೆಯನ್ನು ಧ್ವಂಸ ಮಾಡಿವೆ. ಹಿಂದೊಮ್ಮೆ ಉಗ್ರ ಆದಿಲ್‌ ಊಟ ಮಾಡಲು ಬಂದಿದ್ದ ಸ್ಥಳವನ್ನು ಆತ ತಾಯಿ ಶಹಜಾದಾ ಬಾನೊ, ಭದ್ರತಾ ಪಡೆ ಸಿಬ್ಬಂದಿಗೆ ತೋರಿಸಿದ್ದಾರೆ. ಸದ್ಯ ಉಗ್ರ ಆದಿಲ್​ ಮತ್ತು ಆತನ ಕುಟುಂಬವಿದ್ದ ಮನೆಯನ್ನು ಧ್ವಂಸ ಮಾಡಿದ್ದು. ಅವರ ಕುಟುಂಬವನ್ನೂ ಪಕ್ಕದ ಹಳ್ಳಿಯ ಸಂಬಂಧಿಕರ ಮನೆಗೆ ಶಿಪ್ಟ್​ ಮಾಡಲಾಗಿದೆ. ಇದನ್ನೂ ಓದಿ :ಬರದ ಭೂಮಿಯಲ್ಲಿ ಸೇಬು ಬೆಳೆದು ಮಾದರಿಯಾಗಿದ್ದ ರೈತನಿಗೆ ಮೋದಿ ಮೆಚ್ಚುಗೆ

ಒಂದು ಕಾಲದಲ್ಲಿ ಭರವಸೆಯ ವಿದ್ಯಾರ್ಥಿಯಾಗಿದ್ದ ಆದಿಲ್, ಮಂಗಳವಾರ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಪ್ರಮುಖ ಶಂಕಿತರಲ್ಲಿ ಒಬ್ಬನಾಗಿದ್ದಾನೆ. 2018 ರಿಂದ ಅವನೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಆತನ ಕುಟುಂಬ ಹೇಳಿಕೊಂಡಿದೆ. ನನ್ನ ಮಗ ಈ ಹತ್ಯೆಗಳಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಭಾಗಿಯಾಗಿದ್ದರೆ, ಅವನಿಗೆ ಸೈನಿಕರು ತಕ್ಕ ಶಿಕ್ಷೆ ಕೊಡಲಿ ಎಂದು ಆದಿಲ್‌ನ ತಾಯಿ ಶಹಜಾದಾ ಬಾನೊ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ :ಕೈಕೊಟ್ಟ ಯುವತಿ; ಸೇತುವೆ ಮೇಲಿಂದ ಜಿಗಿದು ಯುವಕ ಆತ್ಮಹತ್ಯೆ

ಈ ವೇಳೆ ಪುತ್ರನಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ‘ನಾವು ನೆಮ್ಮದಿಯಿಂದ ಬದುಕಬೇಕು. ನೀನು ಬಂದು ಶರಣಾಗು’ ಎಂದು ಪುತ್ರನಿಗೆ ಕೇಳಿಕೊಂಡಿದ್ದಾರೆ. ಆದಿಲ್ ತಂದೆ ವಲೀಮ್, ಸಹೋದರರಾದ ಜಹೀರ್ ಮತ್ತು ಅರ್ಶ್ಲಾಮ್ ಮತ್ತು ಸೋದರಸಂಬಂಧಿಗಳಾದ ಜುಲಂಕರ್ ಮತ್ತು ಸಜ್ಜದ್ ಎಲ್ಲರೂ ಬಂಧನದಲ್ಲಿದ್ದಾರೆ. ಅವರ ತಾಯಿಯನ್ನು ಒಂದು ದಿನದ ಮಟ್ಟಿಗೆ ವಶಕ್ಕೆ ಪಡೆಯಲಾಗಿತ್ತು.

RELATED ARTICLES

Related Articles

TRENDING ARTICLES