Monday, May 19, 2025

ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಸುಂದರಿಗೆ 25 ಲಕ್ಷ ಕೊಟ್ಟು ಮೋಸ ಹೋದ ಭೂಪ

ಗದಗ : ದೂರು ನೀಡಲು ಬಂದ ವ್ಯಕ್ತಿಗೆ ಸಿಪಿಐ ಬೆದರಿಸಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಘಟನೆ ಗದಗದಲ್ಲಿ ನಡೆದಿದ್ದು. ಗದಗ ಜಿಲ್ಲೆಯ ರೋಣ ಸಿಪಿಐ ಸಿದ್ದಪ್ಪ ಬೀಳಗಿ ವಿರುದ್ಧ ಗಜೇಂದ್ರಗಡದ ರಾಘವೇಂದ್ರ ರಾಠೋಡ ಎಂಬಾತ ಗಂಭೀರ ಆರೋಪ ಮಾಡಿದ್ದಾರೆ. ದೂರು ನೀಡಲು ಬಂದಿದ್ದ ರಾಘವೇಂದ್ರ ಇನ್ಸ್ಟಗ್ರಾಂನಲ್ಲಿ ಪರಿಚಯವಾಗಿದ್ದ ಯುವತಿಗೆ 25 ಲಕ್ಷ ನೀಡಿ ಮೋಸ ಹೋಗಿದ್ದನು. ಆ ಕಾರಣ ದೂರು ನೀಡಲು ಬಂದಿದ್ದನು ಎಂದು ಮಾಹಿತಿ ದೊರೆತಿದೆ.

ರಾಘವೇಂದ್ರ ರಾಠೋಡಗೆ ಇನ್​ಸ್ಟಾಗ್ರಾಂನಲ್ಲಿ ಓರ್ವ ಯುವತಿ ಪರಿಚಯವಾಗಿದ್ದಾಳೆ. ದಿನಕಳೆದಂತೆ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಬಳಿಕ ಕಷ್ಟ ಹೇಳಿಕೊಂಡ ಯುವತಿಗೆ ರಾಘವೇಂದ್ರ ಹಂತ ಹಂತವಾಗಿ ಬರೋಬ್ಬರಿ 25 ಲಕ್ಷ ರೂ ನೀಡಿದ್ದಾರೆ. ಬಳಿಕ ಹಣ ವಾಪಸ್ ಕೇಳಿದರೆ ಯುವತಿ ನೀಡಿಲ್ಲ. ಹೀಗಾಗಿ ರಾಘವೇಂದ್ರ ಆತ್ಮಹತ್ಯೆ ಯತ್ನಿಸಿದ್ದರು. ಇದನ್ನೂ ಓದಿ:ನಿಂತಿದ್ದ ಲಾರಿಗೆ ಕಾರ್​ ಡಿಕ್ಕಿ; ಮದುವೆಗೆ ಆಹ್ವಾನಿಸಲು ಹೋಗುತ್ತಿದ್ದ ಮೂವರು ಸಾ*ವು

ಇನ್ನು ಹಣ ಪಡೆದ ಯುವತಿ ಸಿಪಿಐ ಸಿದ್ದಪ್ಪ ಬೀಳಗಿ ಸಂಬಧಿಕಳಂತೆ. ಈ ವಿಚಾರಕ್ಕೆ ದೂರು ನೀಡಲು ಬಂದ ರಾಘವೇಂದ್ರಗೆ ಸಿಪಿಐನಿಂದ ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಹಿತಿ ಹಕ್ಕಿನಡಿ ಸಿಸಿಟಿವಿ ದೃಶ್ಯಗಳು ನೀಡುವಂತೆ ಕೇಳಿದ್ದೇನೆ ಎಂದಿದ್ದಾರೆ. ಆಗ ನಿನ್ನ ಮೇಲೆ ರೇಪ್ ಕೇಸ್ ಹಾಕಿಸ್ತಿನಿ, ರೌಡಿ ಶೀಟರ್​ ಹಾಕಿಸ್ತೀನಿ ಅಂತ ಸಿಪಿಪಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ :‘ಸಾಬ್ರು ಎಂಜಲು ತಿನ್ನೋ ಪಾರ್ಟಿ’, ಸಿದ್ದರಾಮಯ್ಯ ವಿರುದ್ದ ಯತ್ನಾಳ್​ ವಾಗ್ದಾಳಿ

ಇನ್ನು  ಕುರಿತು ಗದಗ ಎಸ್ಪಿ ಬಿ.ಎಸ್​ ನೇಮಗೌಡ ಹೇಳಿಕೆ ನೀಡಿದ್ದು. ‘ಈ ವಿಷಯದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬೆದರಿಕೆ, ಲಂಚ ಪಡೆದಿರುವ ಆರೋಪ ಸುಳ್ಳು ಇದೆ. ಆ ಮಹಿಳೆಗೆ ನೀಡಿದ ಹಣ ಕೊಡಿಸುವಂತೆ ನಮ್ಮ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದ. ಹಣ ಕೊಡಿಸದ ಕಾರಣ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿದ್ದಾನೆ. ಈ ಬಗ್ಗೆ ನರಗುಂದ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇನೆ. ಒಂದು ವೇಳೆ ಸಿಪಿಐ ಲಂಚ ಪಡೆದಿದ್ರೆ, ಆತನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES