ಖೈಬರ್ ಪಖ್ತುಂಖ್ವಾ : ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಮಾರಕ ದಾಳಿಯ ಬಗ್ಗೆ ಮಾತನಾಡಿದ್ದು. ‘ದಾಳಿಯ ಬಗ್ಗೆ ಭಾರತ ನಡೆಸುವ ತಟಸ್ಥ ಮತ್ತು ಪಾರದರ್ಶಕ ತನಿಖೆಗೆ ನಾವು ಸಹಕರಿಸಲು ಸಿದ್ದ’ ಎಂದು ಹೇಳಿದ್ದಾರೆ.
ಖೈಬರ್ ಪಖ್ತುಂಕ್ವಾದ, ಅಬೋಟಾಬಾದ್ ನಗರದ ಮಿಲಿಟರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ‘ಭಾರತ ನಮ್ಮ ಮೇಲೆ ಗಡಿಯಾಚೆಗಿನ ಭಯೋತ್ಪಾದನೆ ನಡೆಸುತ್ತಿದ್ದೇವೆ ಎಂದು ಆರೋಪಿಸುತ್ತಿದೆ. ಪಹಲ್ಗಾಂನಲ್ಲಿ ನಡೆದಿರುವ ದಾಳಿಯ ಬಗ್ಗೆ ಭಾರತ ನಡೆಸುವ ಯಾವುದೇ ತಟಸ್ಥ, ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆಯಲ್ಲಿ ಭಾಗವಹಿಸಲು ಪಾಕಿಸ್ತಾನ ಮುಕ್ತವಾಗಿದೆ’ ಎಂದು ಹೇಳಿದರು.
ಇದನ್ನೂ ಓದಿ :ಜಾತಿ, ಧರ್ಮ ಕೇಳಿ ಕೊಲ್ಲಲಾಗಿದೆ, ಯಾವುದೇ ಕಾರಣಕ್ಕೂ ಇಂತಹ ಘಟನೆ ನಡೆಯಬಾರದು : ಖರ್ಗೆ
ಮುಂದುವರಿದು ಮಾತನಾಡಿದ ಶೆಹಬಾಜ್ ಷರೀಫ್ ‘ಒಂದು ವೇಳೆ ಭಾರತ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ ಮಾಡಲು ಯತ್ನಿಸಿದರೆ. ನಮ್ಮ ಧೀರ ಸಶಸ್ತ್ರ ಪಡೆಗಳು ಯಾವುದೇ ದುಸ್ಸಾಹಸದಿಂದ ದೇಶದ ಸಾರ್ವಭೌಮತ್ವ ಮತ್ತು ಅದರ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಸಮರ್ಥವಾಗಿವೆ ಮತ್ತು ಸಿದ್ಧವಾಗಿವೆ, 2019ರಲ್ಲಿ ಭಾರತ ನಮ್ಮ ಮೇಲೆ ಮಾಡಿದ ದಾಳಿಗೆ ನಾವು ದೃಡವಾದ ಪ್ರತಿಕ್ರಿಯೆ ನೀಡಿದ್ದೇವೆ ಎಂದು ಹೇಳಿದರು.