Saturday, April 26, 2025

ಬಾಡಿಗೆಗೆ ಇದ್ದ ಯುವತಿಗೆ ಓನರ್​ ಕಾಟ: ಪ್ರೀತ್ಸೆ, ಪ್ರೀತ್ಸೆ ಎಂದ ಅಂಕಲ್​ ಪೊಲೀಸರ ಅಥಿತಿ

ಬೆಂಗಳೂರು : ಮನೆ ಮಾಲೀಕನೊಬ್ಬ ಬಾಡಗೆಗೆ ಇದ್ದ ಯುವತಿಗೆ ಪ್ರೀತಿಸುವಂತೆ ಪೀಡಿಸಿ ಪೊಲೀಸರ ಅಥಿತಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಆರೋಪಿಯನ್ನು 45 ವರ್ಷದ ಶ್ರೀ ಕಾಂತ್​ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಬನಶಂಕರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಮಲಾನಗರದಲ್ಲಿರುವ ಶ್ರೀಕಾಂತ್​ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಬಾಡಿಗೆಗೆ ಇದ್ದಳು. ಈ ವೇಳೆ ಯುವತಿ ಮೇಲೆ ಕಣ್ಣಾಕ್ಕಿದ್ದ ಶ್ರೀಕಾಂತ್​ ಯುವತಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಯುವತಿ ಶ್ರೀಕಾಂತ್​ನಿಂದ ಅಂತರ್​ ಕಾಯ್ದುಕೊಂಡಿದ್ದಳು. ಆದರೆ ಬೆನ್ನುಬಿದ್ದಿದ್ದ ಶ್ರೀಕಾಂತ್​ ಆಕೆಗೆ ಪದೇ ಪದೇ ಕಿರುಕುಳ ನೀಡುತ್ತಲೆ ಇದ್ದನು. ಇದರಿಂದ ಬೇಸತ್ತಿದ್ದ ಯುವತಿ ಈ ವಿಷಯವನ್ನು ಆತನ ಪತ್ನಿಗೂ ತಿಳಿಸಿದ್ಳು. ಆದರೆ ಶ್ರೀಕಾಂತ ಆಗಲೂ ಕಿರುಕುಳ ನೀಡಲು ಆರಂಭಿಸಿದ್ದನು. ಇದನ್ನೂ ಓದಿ:ಸಿಂಧೂ ನೀರು ಪಾಕ್‌ಗೆ ಹರಿಯಬೇಕು, ಇಲ್ಲದಿದ್ರೆ ಭಾರತೀಯರ ರಕ್ತ ಹರಿಯುತ್ತೆ: ಪಾಕ್​ ಸಚಿವ

ಇದರಿಂದ ಬೇಸತ್ತಿದ್ದ ಯುವತಿ ಮನೆಯನ್ನು ಖಾಲಿ ಮಾಡಿ ಕುರುನರಹಳ್ಳಿಯಲ್ಲಿ ಮತ್ತೊಂದು ಮನೆಯನ್ನು ಬಾಡಿಗೆ ಪಡೆದಿದ್ದಳು. ಸ್ವಲ್ಪ ದಿನ ಶ್ರೀಕಾಂತ್​ ಕೂಡ ಎಲ್ಲಿಯೂ ಕಾಣಿಸಿರಲಿಲ್ಲ. ಆದರೆ ಕಳೆದ ಮೂರು ತಿಂಗಳಿಂದ ಶ್ರೀಕಾಂತ್ ಮತ್ತೇ ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದನು. ಆಕೆಯನ್ನು ಹಿಂಭಾಲಿಸುತ್ತಿದ್ದ ಕಿರಾತಕ ಕಾಲೇಜು ಕ್ಯಾಂಪಸ್​ವರೆಗೂ ಆಕೆಯನ್ನು ಹಿಂಭಾಲಿಸೋಕೆ ಶುರು ಮಾಡಿದ್ದನು.

ಏಪ್ರೀಲ್​ 08ರಂದು ಯುವತಿ ತನ್ನ ಕಾಲೇಜು ಸ್ನೇಹಿತನ ಜೊತೆ ದೇವೇಗೌಡ ಪೆಟ್ರೊಲ್ ಬಂಕ್ ಬಳಿಯ ಬಸ್ ಸ್ಟಾಪ್ ಬಳಿ ಕುಳಿತಿದ್ದಳು. ಈ ವೇಳೆ ಅಲ್ಲಿಗೆ ಬಂದ ಶ್ರೀಕಾಂತ್​ ”ಓ ನೀನು ಇವನನ್ನ ಪ್ರೀತಿಸುತ್ತಿದ್ದಿಯಾ, “ಅದಕ್ಕೆ ನನ್ನ ಲವ್ ಮಾಡಲ್ಲ” ಎಂದು ಜಗಳ ತೆಗೆದಿದ್ದನು. ಅಷ್ಟೇ ಅಲ್ಲದೆ ಯುವತಿ ಮತ್ತು ಆಕೆಯ ಸ್ನೇಹಿತನ ಕಪಾಳಕ್ಕೆ ಹೊಡೆದಿದ್ದನು.

ಇದನ್ನೂ ಓದಿ :ಮೋದಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು, ಮುಸ್ಲಿಂರ ಹೆಸರನ್ನ ಬಳಸುತ್ತಿದ್ದಾರೆ: ಸಂತೋಷ್​ ಲಾಡ್​

ಅಷ್ಟೇ ಅಲ್ಲದೇ ಶ್ರೀ ಕಾಂತ್​ ಜೇಬಿನಲ್ಲಿದ್ದ ಚಾಕುವಿನಿಂದ ಯುವತಿ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದನು. ಘಟನೆಯಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತ ಮುಖಕ್ಕೆ ಹಾನಿಯಾಗಿದ್ದು. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES