Saturday, April 26, 2025

ಮೋದಿಗೆ ಸೀರಿಯಸ್​ನೆಸ್​ ಇಲ್ಲ, ಸರ್ವಪಕ್ಷ ಸಭೆ ಕರೆದು ಚುನಾವಣ ಪ್ರಚಾರಕ್ಕೆ ಹೋಗಿದ್ದಾರೆ: ಖರ್ಗೆ

ಬೆಂಗಳೂರು : ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಆಗಮಿಸದಿದ್ದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಗರಂ ಆಗಿದ್ದು. ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ‘ಪ್ರಧಾನ ಮಂತ್ರಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆದು ಪ್ರಧಾನ ಮಂತ್ರಿ ಚುನಾವಣ ಭಾಷಣ ಮಾಡಲು ಬಿಹಾರಕ್ಕೆ ಹೋಗಿದ್ದಾರೆ. ಅವರ ಆಟಿಟ್ಯೂಡ್​ ಸರಿ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಲ್ಲಿಕಾರ್ಜುನ್​ ಖರ್ಗೆ ‘ಪೆಹಲ್ಗಾವ್ ದಾಳಿಯ ವಿಚಾರವಾಗಿ ಪ್ರಧಾನ ಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆದಿದ್ದರು. ನಾವು ಎಲ್ಲರೂ ಹೋಗಿದ್ದೆವು, ಎಲ್ಲರೂ ಭಾಗಿಯಾಗಿದ್ದೆವು
ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರುಗಳು ಕೂಡ ಇದ್ದರು. ಸರ್ಕಾರ ಒಂದು ಸಭೆಯನ್ನ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು. ಆದರೆ ಅವರ ಹಾಜರಾತಿ ಇರಲಿಲ್ಲ.

ಇದನ್ನೂ ಓದಿ :ಪಹಲ್ಗಾಮ್​ ದಾಳಿಯ ಬಗ್ಗೆ ಭಾರತ ನಡೆಸುವ ತನಿಖೆಗೆ ನಾವು ಸಹಕರಿಸುತ್ತೇವೆ: ಪಾಕ್​ ಪ್ರಧಾನಿ

ಪ್ರಧಾನಿ ಮೋದಿ ಅವರ ಈ ನಡೆ ಸರಿಯಲ್ಲ. ಇಂತಹ ಘಟನೆ ನಡೆದಿದೆ. ಸುಮಾರು 26 ಜನರು ಮೃತಪಟ್ಟಿದ್ದಾರೆ
ಅನೇಕ ಜನರು ಗಾಯಾಳುಗಳಾಗಿದ್ದಾರೆ. ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿ ಇಲ್ಲ. ಚುನಾವಣಾ ಭಾಷಣ ಮಾಡಲು ಬಿಹಾರಕ್ಕೆ ಹೋಗಿದ್ದೀರಿ, ಅವರಿಗೆ ಸೀರಿಯಸ್​ನಸ್​ ಇಲ್ಲ. ಅವರು ಇಂಗ್ಲಿಷ್ ಹಾಗು ಹಿಂದಿಯಲ್ಲಿ ಬೇರೆ ಕಡೆ ಭಾಷಣ ಮಾಡುವ. ಬದಲು ಇಲ್ಲಿ ಬಂದು ಸಮಜಾಯಿಷಿ ಹೇಳಬೇಕಿತ್ತು.

ಪಹಲ್ಗಾಂನಲ್ಲಿ ಏನೇನು ನಡೆಯತು. ಯಾರು ಹೊಣೆ ಹೊತ್ತಿದ್ದಾರೆ. ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆಯೇ, ಇಂಟೆಲಿಜೆನ್ಸ್ ಲ್ಯಾಪ್ಸ್ ಆಗಿದೆಯೇ, ಐಬಿ ಲ್ಯಾಪ್ಸ್ ಆಗಿದೆಯೇ, ಇನ್ಫಾರ್ಮರ್ಸ್ ಲ್ಯಾಪ್ಸ್ ಆಗಿದೆಯೇ, ಪೊಲೀಸರ ಲ್ಯಾಪ್ಸ್ ಆಗಿದೆಯೇ? ಯಾರದ್ದು ಅನ್ನೋದು ಅವರು ನಮಗೆ ತಿಳಿಸಬೇಕು. ಆದರೆ ಅವರು ಬರಲೇ ಇಲ್ಲ. ಅದಕ್ಕೆ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಿತು ಎಂದು ಹೇಳಿದರು.

ಸೆಕ್ಯೂರಿಟಿ ಲ್ಯಾಪ್ಸ್​ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ..! 

ಸರ್ವಪಕ್ಷಗಳ ಸಭೆಯಲ್ಲಿ ಸ್ವತಃ ಅಮಿತ್​ ಶಾ ಸೆಕ್ಯುರಿಟಿ ಲ್ಯಾಪ್ಸ್​ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಮಿತ್ ಶಾ ಅವರಿಗೆ ನಾವು ಹೇಳಿದ್ದೇವೆ. ‘ಇದನ್ನ ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು. ಎಲ್ಲವನ್ನು ವ್ಯವಸ್ಥೆ ಮಾಡಬೇಕಿತ್ತು
ನೀವು ವ್ಯವಸ್ಥೆ ಮಾಡದೆ ಇರುವುದರಿಂದಲೇ ಈ ಸ್ಥಿತಿಗೆ ಬಂದಿರೋದು. ಇನ್ಮುಂದೆ ಈ ರೀತಿ ಆಗೋದಿಲ್ಲ ಅಂತ ಅಮಿತ್ ಶಾ ತಿಳಿಸಿದ್ದಾರೆ. ಮೂರು ಹಂತಗಳ ಸೆಕ್ಯೂರಿಟಿ ಇದ್ದರೂ ಕೂಡ ಇಷ್ಟು ಜನರಿಗೆ ರಕ್ಷಣೆ ಕೊಡಲು ಆಗಲಿಲ್ಲ.

ಇದನ್ನೂ ಓದಿ :ಜಾತಿ, ಧರ್ಮ ಕೇಳಿ ಕೊಲ್ಲಲಾಗಿದೆ, ಯಾವುದೇ ಕಾರಣಕ್ಕೂ ಇಂತಹ ಘಟನೆ ನಡೆಯಬಾರದು : ಖರ್ಗೆ

ಆದರೆ ಏನೇ ಆದರೂ ಕೂಡ ದೇಶದ ದೃಷ್ಟಿಯಿಂದ, ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಅಂತ ತಿಳಿಸಿದ್ದೇವೆ. ಸರ್ಕಾರದ ನಿರ್ಣಯಕ್ಕೆ ನಾವು ಕೂಡ ಬೆಂಬಲ ಸೂಚಿಸುತ್ತೇವೆ ಅಂತ ತಿಳಿಸಿದ್ದೇವೆ. ಇದು ಹುಳುಕು ಹುಡುಕುವ ಸಮಯ ಅಲ್ಲ. ಕೆಲವು ವಿಷಯಗಳನ್ನ ಈಗಲೇ ಹೇಳೋದು ಚೆನ್ನಾಗಿರಲ್ಲ. ನಮ್ಮಿಂದ ಹೋಗುವಂತ ನೀರನ್ನ ಹಿಡಿದಿಡಲು ಹೇಗೆ ಆಗುತ್ತೆ? ಈಗ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ, ನಿರ್ಣಯ ದೇಶಕ್ಕೆ ಒಳ್ಳೇದು ಆಗುತ್ತೆ ಅಂತ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES