ದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಳಿಕ ಎರಡು ದೇಶಗಳು ರಾಜತಾಂತ್ರಿಕವಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. 1972ರ ಯುದ್ದ ನಂತರ ಎರಡು ದೇಶಗಳ ನಡುವೆ ಏರ್ಪಟ್ಟಿದ್ದ ಶಿಮ್ಲಾ ಒಪ್ಪಂದವನ್ನು ಪಾಕ್ ಉಲ್ಲಂಘಿಸುವಾಗಿ ಹೇಳಿಕೊಂಡಿದ್ದು. ಇತ್ತ ಶಿಮ್ಲಾದ ರಾಜಭವನದ ಕೀರ್ತಿ ಹಾಲ್ನಲ್ಲಿದ್ದ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿನ ಮೇಲಿಲ ಪಾಕ್ ಧ್ವಜವನ್ನು ಭಾರತ ತೆಗೆದು ಹಾಕಿದೆ.
1971ರಲ್ಲಿ ನಡೆದ ಭಾರತ ಮತ್ತ ಪಾಕ್ ಯುದ್ದದ ಸಂದರ್ಭದಲ್ಲಿ ಪಾಕಿಸ್ತಾನದ 90 ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಭಾರತಕ್ಕೆ ಶರಣಾಗಿದ್ದರು. ಇದು ಎರಡು ದೇಶದ ನಡುವಿನ ಕದನ ವಿರಾಮಕ್ಕೆ ಕಾರಣವಾಗಿತ್ತು. ಇದರ ಪರಿಣಾಮ ಬಾಂಗ್ಲಾದೇಶ ಉದಯಿಸಿತು. ನಂತರ ಈ ಯುದ್ದದ ಬಳಿಕ ಶಾಂತಿಯ ಸ್ಥಾಪನೆಗಾಗಿ ಶಿಮ್ಲಾ ಒಪ್ಪಂದವನ್ನು ಜುಲೈ 3, 1972ರಲ್ಲಿ ಮಾಡಿಕೊಳ್ಳಲಾಯಿತು.
ಇದನ್ನೂ ಓದಿ :ಪಾಕ್ ಜೊತೆ ಯುದ್ದದ ಅನಿವಾರ್ಯತೆ ಇಲ್ಲ, ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ: ಸಿಎಂ ಸಿದ್ದರಾಮಯ್ಯ

ಈ ಒಪ್ಪಂದಕ್ಕೆ ಸಹಿ ಹಾಕಿದ ಮರದ ಮೇಜನ್ನು ಶಿಮ್ಲಾದ ರಾಜಭವನದ ಕೀರ್ತಿ ಹಾಲ್‌ನಲ್ಲಿ ಇರಿಸಲಾಗಿದೆ. ಇದರ ಮೇಲೆ ಶಿಮ್ಲಾ ಒಪ್ಪಂದಕ್ಕೆ ಇಲ್ಲಿ 3-7-1972 ರಂದು ಸಹಿ ಹಾಕಲಾಯಿತು ಎಂದು ಬರೆಯಲಾದ ಫಲಕವನ್ನು ಇರಿಸಲಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಂದಿನ ಪಾಕಿಸ್ತಾನ ಪ್ರಧಾನಿ ಜುಲ್ಫಿಕರ್ ಭುಟ್ಟೊ ಈ ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಛಾಯಾಚಿತ್ರವನ್ನು ಮೇಜಿನ ಒಂದು ಬದಿಯಲ್ಲಿ ಇರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಧ್ವಜಗಳನ್ನು ಮೇಜಿನ ಮೇಲೆ ಇರಿಸಲಾಗಿತ್ತು, ಈಗ ಭಾರತೀಯ ಧ್ವಜವನ್ನು ಮಾತ್ರ ಇರಿಸಲಾಗಿದ್ದು, ಪಾಕ್ ಧ್ವಜವನ್ನು ತೆರವುಗೊಳಿಸಲಾಗಿದೆ.