Sunday, April 27, 2025

‘ನಾನು ಭಾರತದ ಸೊಸೆ’: ದೇಶ ತೊರೆಯಲು ಸೀಮಾ ಹೈದರ್​ ನಕಾರ

ದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭೀಕರ ಭಯೋತ್ಫಾದಕ ದಾಳಿಯ ನಂತರ ಭಾರತ ಸರ್ಕಾರ ಪಾಕ್​ ವಿರುದ್ದ ಅನೇಕ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಆ ಪ್ರಮುಖ ನಿರ್ಧಾರಗಳಲ್ಲಿ ಒಂದೆಂದರೆ ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನಿಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವುದು. ವಿದೇಶಾಂಗ ಸಚಿವಾಲಯ ಗುರುವಾರ ಪಾಕಿಸ್ತಾನಿಗಳಿಗೆ ನೀಡಲಾದ ಎಲ್ಲಾ ಅಸ್ತಿತ್ವದಲ್ಲಿರುವ ವೀಸಾಗಳನ್ನು ರದ್ದುಗೊಳಿಸಿದೆ. ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳು ಬೇಗನೆ ಮರಳುವಂತೆ ಸಚಿವಾಲಯ ಸೂಚಿಸಿದೆ.

ಇದರ ನಡುವೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್​ ದೇಶ ತೊರೆಯಬೇಕೆ ಎಂದು ಚರ್ಚೆಗಳು ಆರಂಭವಾಗಿದ್ದವು. ಈ ಸೀಮಾ ಹೈದರ್​ ಕೊವಿಡ್-19 ಸಮಯದಲ್ಲಿ, ಅವರು ಆನ್‌ಲೈನ್ ಗೇಮ್ PUBG ಮೂಲಕ ಭಾರತದ 22 ವರ್ಷದ ಅಂಗಡಿ ಸಹಾಯಕ ಸಚಿನ್ ಮೀನಾ ಅವರೊಂದಿಗೆ ಸಂಪರ್ಕ ಬೆಳೆಸಿ.  ಮೇ 2023ರಲ್ಲಿ ದುಬೈ ಮತ್ತು ನೇಪಾಳದ ಮೂಲಕ ತನ್ನ ಮೊದಲ ಮದುವೆಯಿಂದ 4 ಮಕ್ಕಳೊಂದಿಗೆ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದರು. ಅವರು ಈಗ ಸಚಿನ್ ಅವರೊಂದಿಗೆ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಈ ವರ್ಷ ಮಗಳು ಕೂಡ ಹುಟ್ಟಿದ್ದಾಳೆ. ಇದನ್ನೂ ಓದಿ :ಹೆದ್ದಾರಿ ಸ್ವಚ್ಚಗೊಳಿಸುತ್ತಿದ್ದ ಸ್ವಚ್ಚತ ಸಿಬ್ಬಂದಿಗೆ ಪಿಕಪ್​ ವಾಹನ ಡಿಕ್ಕಿ: 6 ಮಂದಿ ಸಾ*ವು

ಈ ಇಬ್ಬರನ್ನು 2023ರಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ ನಂತರ ಜಾಮೀನಿನ ಮೇಲೆ ಇಬ್ಬರನ್ನು ಬಿಡಯಕಡೆ ಮಾಡಲಾಗಿತ್ತು. ಸೀಮಾ ಇನ್ನೂ ಭಾರತೀಯ ಪೌರತ್ವವನ್ನು ಪಡೆದಿಲ್ಲ. ನ್ಯಾಯಾಂಗವು ಇನ್ನೂ ಅವರ ಕಾನೂನು ಸ್ಥಿತಿಯನ್ನು ಪರಿಶೀಲಿಸುತ್ತಿದೆ. ಹೀಗಾಗಿ, ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ನಿರ್ಧಾರಗಳು ಸೀಮಾಗೆ ಅನ್ವಯವಾಗುತ್ತದೆಯೇ? ಎಂಬ ಚರ್ಚೆಗಳು ನಡೆದಿವೆ.

ಇದನ್ನೂ ಓದಿ :ದೇಶಕ್ಕೆ ಏನ್​ ಆದರೂ ಪರವಾಗಿಲ್ಲ, ವೋಟ್​ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಸಿಎಂ ಬಂದಿದ್ದಾರೆ: ಅಶೋಕ್​

ಆದರೆ, ಈ ಬಗ್ಗೆ ಸೀಮಾ ಹೈದರ್ ಪ್ರತಿಕ್ರಿಯಿಸಿದ್ದು, ‘ನಾನೀಗ ಭಾರತದ ಸೊಸೆಯಾಗಿದ್ದೇನೆ. ನಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಭಾರತದಲ್ಲೇ ಇರುತ್ತೇನೆ ಎಂದಿದ್ದಾರೆ. “ನಾನು ಪಾಕಿಸ್ತಾನದ ಮಗಳಾಗಿದ್ದೆ, ಆದರೆ ಈಗ ನಾನು ಭಾರತದ ಸೊಸೆ, ನಾನು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ನಾನು ಪ್ರಧಾನಿ (ನರೇಂದ್ರ) ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ (ಆದಿತ್ಯನಾಥ್) ಅವರಲ್ಲಿ ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಮನವಿ ಮಾಡುತ್ತೇನೆ” ಎಂದು ಸೀಮಾ ಹೈದರ್ ಹೇಳಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಅವರು ತಮ್ಮನ್ನು ಕೂಡ ಗಡೀಪಾರು ಮಾಡುವ ಭಯದಲ್ಲಿದ್ದಾರೆ. ಸಚಿನ್​ ಮತ್ತು ಸೀಮಾಗೆ ಮೀನಾ ಭಾರತಿ ಎಂಬ

RELATED ARTICLES

Related Articles

TRENDING ARTICLES