Sunday, April 27, 2025

ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಂದೆ–ಮಗಳು ದಾರುಣ ಸಾ*ವು

ಚಿಕ್ಕಬಳ್ಳಾಪುರ : ಅಪ್ಪ-ಮಗಳು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಕರುಣಾ ಜನಕ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು. ಅಪ್ಪ-ಮಗಳ ಸಾವಿಗೆ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಮೃತ ರ್ದುದೈವಿಗಳನ್ನು 45 ವರ್ಷದ ನಾಗೇಶ್​ ಮತ್ತು 13 ವರ್ಷದ ಧನುಶ್ರೀ ಎಂದು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ತೋಟದಿಂದ ಮನೆಗೆ ತೆರಳುತ್ತಿದ್ದ ಮಾರ್ಗದಲ್ಲಿರುವ ಕೆರೆಯಲ್ಲಿ ನಾಗೇಶ್​ ಪುತ್ರಿ ಧನುಶ್ರೀ ಕೈ-ಕಾಲು ತೊಳೆಯಲು ಹೋಗಿದ್ದಳು. ಆದರೆ ಈ ವೇಳೆ ಧನುಶ್ರೀ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ಈ ವೇಳೆ ಮಗಳನ್ನು ರಕ್ಷಿಸಲು ನಾಗೇಶ್​ ಕೆರೆಗೆ ಇಳಿದಿದ್ದು. ಕೆರೆಯ ಹೂಳಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಇಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ :‘ನಾನು ಭಾರತದ ಸೊಸೆ’: ದೇಶ ತೊರೆಯಲು ಸೀಮಾ ಹೈದರ್​ ನಕಾರ

ಘಟನೆ ಸಂಬಂಧ ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದ್ದು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ಶಾಸಕ ರವಿಕುಮಾರ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದು. ಘಟನೆ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES