Saturday, April 26, 2025

ಸಿಂಧೂ ನೀರು ಪಾಕ್‌ಗೆ ಹರಿಯಬೇಕು, ಇಲ್ಲದಿದ್ರೆ ಭಾರತೀಯರ ರಕ್ತ ಹರಿಯುತ್ತೆ: ಪಾಕ್​ ಸಚಿವ

ಇಸ್ಲಮಾಬಾದ್​ : ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿನ ಭೀಕರ ಉಗ್ರದಾಳಿಯ ನಂತರ ಭಾರತ ಪಾಕ್​ ವಿರುದ್ದ ರಾಜತಾಂತ್ರಿಕ ಕ್ರಮ ಕೈಗೊಂಡಿದ್ದು. ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸಿದೆ. ಈ ಕುರಿತು ಇದೀಗ ಪಾಕ್​ನ ವಿದೇಶಾಂಗ ಸಚಿವ ಬಿಲಾವಲ್​ ಭುಟ್ಟೋ ಜರ್ಧಾರಿ ನಾಲಿಗೆ ಹರಿಬಿಟ್ಟಿದ್ದು. ಸಿಂಧೂ ನದಿಯಲ್ಲಿ ನೀರು ಹರಿಯುತ್ತದೆ, ಅಥವಾ ಅವರ (ಭಾರತೀಯರ) ರಕ್ತ ಹರಿಯುತ್ತದೆ ಎಂದು ಹೇಳಿದ್ದಾನೆ.

ಸಿಂಧೂ ನದಿಯ ದಡದಲ್ಲಿನ ಸುಕ್ಕೂರ್​ನಲ್ಲಿ ಮಾತನಾಡಿದ ಭುಟ್ಟೋ “ಪಹಲ್ಗಾಮ್ ಘಟನೆಯ ಬಗ್ಗೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡಿದೆ, ಮೋದಿ ತಮ್ಮ ದೌರ್ಬಲ್ಯಗಳನ್ನು ಮರೆಮಾಚಲು ಮತ್ತು ತಮ್ಮ ಜನರನ್ನು ಮೋಸಗೊಳಿಸಲು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಸಿಂಧೂ ಜಲ ಒಪ್ಪಂದವನ್ನು ಅವರು ಏಕಪಕ್ಷೀಯವಾಗಿ ಅಮಾನತುಗೊಳಿಸಲು ನಿರ್ಧರಿಸಿದ್ದಾರೆ, ಈ ಮೂಲಕ ಸಿಂಧೂ ನದಿ ಪಾಕಿಸ್ತಾನಕ್ಕೆ ಸೇರಿದೆ ಎಂದು ಭಾರತ ಒಪ್ಪಿಕೊಂಡಿದೆ. ಇದನ್ನೂ ಓದಿ :ಮೋದಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು, ಮುಸ್ಲಿಂರ ಹೆಸರನ್ನ ಬಳಸುತ್ತಿದ್ದಾರೆ: ಸಂತೋಷ್​ ಲಾಡ್​

ಸಿಂಧೂ ನದಿ ಎಂದಿಗೂ ನಮ್ಮದೇ ಆಗಿರುತ್ತದೆ. ಸಿಂಧೂ ನದಿಯಲ್ಲಿ ನೀರು ಹರಿಯುತ್ತದೆ ಅಥವಾ ಅವರ ರಕ್ತ ಹರಿಯುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಂಡುತನ ತೋರಿದ್ದಾರೆ. ಇತ್ತ ಭಾರತ ಸಿಂಧೂ ನದಿ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದ್ದು. ನಿನ್ನೆ ಅಮಿತ್ ಶಾ ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ.

ಏನಿದು ಸಿಂಧೂ ನದಿ ನೀರು ಒಪ್ಪಂದ

ಸಿಂಧು ನದಿ ನೀರಿನ ಒಪ್ಪಂದ ಎಂಬುದು 1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಆದ ಅಂತಾರಾಷ್ಟ್ರೀಯ ಒಪ್ಪಂದ. ವಿಶ್ವ ಬ್ಯಾಂಕ್‌ನ ಮಧ್ಯಸ್ಥಿಕೆ ಈ ಒಪ್ಪಂದವಾಗಿತ್ತು. ಸಿಂಧು ನದಿ ನೀರನ್ನು ಎರಡೂ ದೇಶಗಳ ನಡುವೆ ಹಂಚಿಕೆ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಈ ಒಪ್ಪಂದವು ಇಂದಿಗೂ ಎರಡೂ ದೇಶಗಳ ನಡುವಿನ ನೀರಿನ ಸಂಬಂಧವನ್ನು ನಿಯಂತ್ರಿಸುತ್ತದೆ ಮತ್ತು ಇದನ್ನು ಯಶಸ್ವಿ ಒಪ್ಪಂದವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ :ಮಾನಸಿಕ ಖಿನ್ನತೆ: ಗುಂಡು ಹಾರಿಸಿಕೊಂಡು ಕಾರ್ಪೋರೇಟರ್​ ಪುತ್ರ ಆತ್ಮಹ*ತ್ಯೆ

ಸಿಂಧೂ ಜಲ ಒಪ್ಪಂದಕ್ಕೆ ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನಿ ಮಿಲಿಟರಿ ಜನರಲ್ ಅಯೂಬ್ ಖಾನ್ ನಡುವೆ ಸೆಪ್ಟೆಂಬರ್ 19, 1960 ರಲ್ಲಿ ಕರಾಚಿಯಲ್ಲಿ ಸಹಿ ಹಾಕಿದ್ದರು. 62 ವರ್ಷಗಳ ಹಿಂದೆ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ, ಭಾರತವು ಸಿಂಧೂ ಮತ್ತು ಅದರ ಉಪ ನದಿಗಳಿಂದ ಶೇಕಡಾ 19.5 ರಷ್ಟು ನೀರು ಪಡೆದರೆ, ಪಾಕಿಸ್ತಾನ ಸುಮಾರು ಶೇಕಡ 80 ರಷ್ಟು ನೀರು ಪಡೆಯುತ್ತದೆ. ಈ ಒಪ್ಪಂದದ ಪ್ರಕಾರ, ಎರಡೂ ದೇಶಗಳ ನಡುವೆ ಪ್ರತಿ ವರ್ಷ ಸಿಂಧೂ ಜಲ ಆಯೋಗದ ಸಭೆ ನಡೆಸುವುದು ಕಡ್ಡಾಯವಾಗಿದೆ.

RELATED ARTICLES

Related Articles

TRENDING ARTICLES