ಪಹಲ್ಗಾಮ್ ಉಗ್ರರ ದಾಳಿ ಪ್ರಕರಣದಲ್ಲಿ ಯುದ್ಧದ ಅನಿವಾರ್ಯತೆ ಇಲ್ಲವೆಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅಶೋಕ್ ‘ಸಿದ್ದರಾಮಯ್ಯ ಮಾನಸಿಕ ಸ್ಥಿತಿ ಪೂರ್ತಿ ಮುಸ್ಲಿಮರ ಮತದ ಬಗ್ಗೆಯೇ ಯೋಚಿಸುವ ರೀತಿ ಆಗಿರುವುದು ದುರದೃಷ್ಟಕರ. ಹಾಗಾದರೆ ಸತ್ತಿರುವವರ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಹಮಾಸ್ ಉಗ್ರರು ಬಂದು ತರಬೇತಿ ನೀಡಿ ಕಳುಹಿಸಿದ್ದರು ಎಂಬುದು ಮಾಹಿತಿಗಳ ಮೂಲಕ ಹೊಂದಾಣಿಕೆ ಆಗುತ್ತಿದೆ. ಇದನ್ನೂ ಓದಿ : ಪಹಲ್ಗಾಮ್ನಲ್ಲಿ ಧರ್ಮ ಕೇಳಿ ಕೊಂದಿಲ್ಲ ಅನ್ನೋದು ನನ್ನ ಭಾವನೆ: ಆರ್.ಬಿ ತಿಮ್ಮಾಪುರ
ನಡೆದಿರುವ ಘಟನೆಯನ್ನು ಸಿದ್ದರಾಮಯ್ಯ ಅವರು ಮಾತ್ರ ಕ್ಷಮಿಸಬಹುದಷ್ಟೇ. ದೇಶಕ್ಕೆ ಏನು ಆದರೂ ಪರವಾಗಿಲ್ಲ, ತಮಗೆ ಮತ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಬಂದಿದ್ದಾರೆ. ಸಿದ್ಧಾಂತವೇ ಇಲ್ಲದ ಸಿದ್ದರಾಮಯ್ಯ ಇಂದು ನಮ್ಮ ಮುಂದೆ ಇದ್ದಾರೆ. ನಿಮ್ಮ ಮನೆಯಲ್ಲಿ ಈ ರೀತಿ ಉಗ್ರರು ಬಂದು ಹೊಡೆದು ಹಾಕಿರುತ್ತಿದ್ದರೆ ಈ ರೀತಿ ಹೇಳುತ್ತಿದ್ದರಾ? ಹಾಗಾದರೆ ಸತ್ತವರ ಮನೆ ಬಾಗಿಲಿಗೆ ಹಾರ ಹಾಕಲು ಯಾಕೆ ಹೋಗಿದ್ರಿ? ಇಲ್ಲಿ ಬಂದು ಸತ್ತವರು ಸತ್ತರು ಎನ್ನುವುದು ನಾಚಿಕೆಗೇಡಿನ ಸಂಗತಿ. ಇದನ್ನೂ ಓದಿ :ಮೋದಿಗೆ ಸೀರಿಯಸ್ನೆಸ್ ಇಲ್ಲ, ಸರ್ವಪಕ್ಷ ಸಭೆ ಕರೆದು ಚುನಾವಣ ಪ್ರಚಾರಕ್ಕೆ ಹೋಗಿದ್ದಾರೆ: ಖರ್ಗೆ
ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಮನೆ ಮುರಿಯುವ ಮಾತಾಡಿದ್ದಾರೆ. ಯಾವುದೇ ಪಾಕಿಸ್ತಾನಿ ಭಾರತದಲ್ಲಿ ಇರಬಾರದು ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಭಟ್ಕಳದಲ್ಲಿ 10ಕ್ಕಿಂತ ಹೆಚ್ಚು ಪಾಕಿಸ್ತಾನದವರು ಇದ್ದಾರೆ. ಆದರೆ ಪಾಕಿಸ್ತಾನದಲ್ಲಿ ಈಗಾಗಲೇ ಭಾರತೀಯರನ್ನು ಹೊರ ಹಾಕಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ ಯಾಕೆ ಮಾತನಾಡುತ್ತಿಲ್ಲ. ಕೂಡಲೇ ಭಟ್ಕಳದಲ್ಲಿರುವ ಪಾಕಿಸ್ತಾನದವರನ್ನು ಒದ್ದು ಹೊರ ಹಾಕಬೇಕು. ಮೀರ್ ಸಾಧಿಕ್‌ನಂತವರು ನಮ್ಮಲ್ಲೇ ಇದ್ದಾರೆ ಎಂದು ಆರೋಪಿಸಿದರು.