Friday, April 25, 2025

ಕಳೆದ 3 ದಶಕಗಳಿಂದ ಕೊಳಕು ಕೆಲಸ ಮಾಡಿದ್ದೇವೆ: ಭಯೋತ್ಪಾದನೆಯನ್ನು ಒಪ್ಪಿಕೊಂಡ ಪಾಕ್​

ಭಯೋತ್ಪಾದನೆ ಬೆಂಬಲಿಸುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನವು ತಮ್ಮ ನೀಚ ಕೃತ್ಯವನ್ನು ಒಪ್ಪಿಕೊಂಡಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್​ ನಾವು 3 ದಶಕಗಳಿಂದ ಈ ನೀಚ ಕೆಲಸ ಮಾಡುತ್ತಿದ್ದೀವಿ ಎಂದು ಹೇಳಿದ್ದು. ಭಯೋತ್ಪಾದಕರಿಗೆ ಆಶ್ರಯ ನೀಡುವುದಾಗಿ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜ ಆಸಿಫ್​ ಸ್ಕೈ ನ್ಯೂಸ್​ ಎಂಬ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಕಳೆದ ಮೂರು ದಶಕಗಳಿಂದ ಅಮೆರಿಕ ಮತ್ತು ಬ್ರಿಟನ್​ ಸೇರಿದಂತೆ ದಕ್ಷಿಣದ ರಾಷ್ಟ್ರಗಳಿಗಾಗಿ ಈ ಕೊಳಕು ಕೆಲಸ ಮಾಡುತ್ತಿದ್ದೇವೆ. ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸುವುದು ಸೇರಿದಂತೆ ಭಯೋತ್ಪಾದನೆ ಉತ್ತೇಜಿಸುವಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಭಾರತ ದಾಳಿ ನಡೆಸಿದರೆ ಸಂಪೂರ್ಣ ಯುದ್ದ ನಡೆಯುತ್ತಿದೆ: ಪಾಕ್​ ರಕ್ಷಣಾ ಸಚಿವ

ಮುಂದುವರಿದು ಮಾತನಾಡಿದ ಖ್ವಾಜಾ ಆಸಿಫ್​ ‘ನಾವು ತಪ್ಪು ಮಾಡಿದ್ದೇವೆ. ಈ ಕೆಲಸದಿಂದ ನಾವು ಸಂಕಷ್ಟ ಅನುಭವಿಸಿದ್ದೇವೆ. ನಾವು ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು ನಂತರ 9/11ರ ಅಮೇರಿಕಾದ ಅವಳಿ ಕಟ್ಟಡ ದಾಳಿಯಲ್ಲಿ ಸೇರಿರದಿದ್ದರೆ ನಮ್ಮ ಮೇಲೆ ಈ ಆರೋಪ ಬರುತ್ತಿರಲಿಲ್ಲ.

ಇದನ್ನು ಓದಿ:ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ವಿಧಿವಶ

ಅಷ್ಟೇ ಅಲ್ಲದೇ ಪಹಲ್ಗಾಮ್‌ ಘಟನೆಯ ನಂತರ ಭಾರತದೊಂದಿಗೆ ಸಂಪೂರ್ಣ ಯುದ್ಧ ನಡೆಸುವ ಸಾಧ್ಯತೆಯಿದೆ. ಭಾರತದ ಪ್ರತಿಕ್ರಿಯೆ ಸರಿಯಾದ ಪ್ರತಿಕ್ರಿಯೆಯನ್ನು ನಾವು ನೀಡುತ್ತೇವೆ ಎಂದು ಆಸಿಫ್ ತಿಳಿಸಿದರು.

RELATED ARTICLES

Related Articles

TRENDING ARTICLES