Saturday, April 26, 2025

ಮಾನಸಿಕ ಖಿನ್ನತೆ: ಗುಂಡು ಹಾರಿಸಿಕೊಂಡು ಕಾರ್ಪೋರೇಟರ್​ ಪುತ್ರ ಆತ್ಮಹ*ತ್ಯೆ

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಮಾಜಿ ಕಾರ್ಪೋರೇಟರ್‌ ಪುತ್ರ. ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು. ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಅಶ್ನನ್​ ಮಿರ್ಜಿ ಎಂದು ಗುರುತಿಸಲಾಗಿದೆ.

ವಿಜಯಪುರದ ಪ್ರತಿಷ್ಟಿತ ಮಾಜಿ ಕಾರ್ಪೋರೆಟರ್‌ ಪ್ರಕಾಶ ಮಿರ್ಜಿಯ ಪುತ್ರ ಅಶ್ನನ್​ ಮಿರ್ಜಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾತ್ರಿ ಬೆಡ್‌ ರೂಂ ಸೇರಿದ್ದ ಅಶ್ನನ್​ ಮಿರ್ಜಿ ಬೆಳಿಗ್ಗೆವರೆಗೂ ಹೊರಗೆ ಬಂದಿರಲಿಲ್ಲ. ಬೆಡ್‌ ರೂಂನಲ್ಲಿ ಒಳಗಿನಿಂದ ಲಾಕ್‌ ಮಾಡಿಕೊಂಡಿದ್ದ. ಮನೆಯವರು ಕರೆದರು ರೆಸ್ಪಾನ್ಸ್‌ ಮಾಡಿರಲಿಲ್ಲ. ಆದ್ರೆ ಸರಿಯಾಗಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಡ್‌ ರೂಂನಿಂದ ಢಮ್‌ ಎಂದು ಗುಂಡು ಹಾರಿದ ಸದ್ದು ಕೇಳಿಸಿದೆ.

ಇದನ್ನೂ ಓದಿ :ಸಿಂಧೂ ನದಿ ನೀರನ್ನು ಎಲ್ಲಿ ಸಂಗ್ರಹಿಸುತ್ತೀರಾ; ಕೇಂದ್ರ ಸರ್ಕಾರಕ್ಕೆ ಓವೈಸಿ ಪ್ರಶ್ನೆ

ಆಗ ತಂದೆ ಪ್ರಕಾಶ್‌ ಸ್ಥಳೀಯರ ನೆರವಿನೊಂದಿಗೆ ಬಾಗಿಲು ಒಡೆದು ನೋಡಿದ್ರೆ ಮಗ ಅಶ್ನನ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಲೆಗೆ ಒಂದು ರೌಂಡ್‌ ಪೈರ್‌ ಆಗಿ ಬುಲೆಟ್‌ ಬುರುಡೆಯನ್ನ ಸೀಳಿ ಹೊರ ಬಂದಿತ್ತು. ಆಸ್ಪತ್ರೆಗೆ ಒಯ್ಯಲು ಪ್ರಯತ್ನಿಸಿದ್ದರಾದರು, ಅಶ್ನನ್‌ ಸ್ಥಳದಲ್ಲೆ ಸಾವನ್ನಪ್ಪಿದ್ದ. ಈ ಬಗ್ಗೆ ಸ್ವತಃ ತಂದೆ ಮಾಜಿ ಕಾರ್ಪೋರೆಟರ್‌ ಪ್ರಕಾಶ ಮಿರ್ಜಿರನ್ನ ಕೇಳಿದಾಗ. ಕೆಲ ತಿಂಗಳಿಂದ ಮಗ ಖಿನ್ನತೆಗೆ ಒಳಗಾಗಿದ್ದ. ಈ ಕುರಿತು ಟ್ರೀಟ್ಮೆಂಟ್‌ ಸಹ ಕೊಡಿಸಲಾಗ್ತಿತ್ತು. ಅಷ್ಟರಲ್ಲೆ ಅನಾಹುತ ಮಾಡಿಕೊಂಡಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ :ಅಪ್ರಾಪ್ತ ಮಗಳ ಎದುರೆ ತಾಯಿಯ ಮೇಲೆ ಅತ್ಯಾಚಾರ

ಇನ್ನೂ ಕೆಲ ಮಾಹಿತಿಗಳ ಪ್ರಕಾರ ಪ್ರಕಾಶ ಪುತ್ರ ಕಳೆದ ಐದಾರು ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದು ನಿಜವಂತೆ. ಅಲ್ಲದೆ ಕಳೆದ 2 ತಿಂಗಳಿನಿಂದ ಮನೆಯಿಂದ ಹೊರಗು ಸಹ ಬಂದಿರಲಿಲ್ಲವಂತೆ. ಅಲ್ಲದೆ ಈ ಹಿಂದೆಯೂ ಕೈಯ್ಯನ್ನ ಬ್ಲೇಡ್‌ ನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ಇಷ್ಟಾದ ಮೇಲೆ ಪ್ರಕಾಶ ಮಗನಿಗೆ ಮಾನಸಿಕ ತಜ್ಞರ ಬಳಿಯಲ್ಲಿ ತಪಾಸಣೆ ಮಾಡಿಸಿ ಅಗತ್ಯ ಟ್ರೀಟ್ಮೆಂಟ್‌ ಸಹ ಕೊಡಿಸುತ್ತಿದ್ದರಂತೆ. ಆದ್ರೆ ಕಳೆದ ಎರಡು ದಿನಗಳಿಂದ ಅಶ್ನನ್‌ ತೀವ್ರ ಖಿನ್ನತೆಗೆ ಒಳಗಾಗಿದ್ದನಂತೆ. ನಿನ್ನೆ ರಾತ್ರಿಯಿಂದ ತಂದೆಯ ಬಳಿ ಇದ್ದ ಪಿಸ್ತೂಲನ್ನ ಹುಡುಕುತ್ತಿದ್ದನಂತೆ. ರಾತ್ರಿ ಯಾರಿಗೂ ಗೊತ್ತಾಗದಂತೆ ತಿಜೋರಿಯಲ್ಲಿದ್ದ ಪಿಸ್ತೂಲನ್ನ ತನ್ನ ಬಳಿ ಇಟ್ಟುಕೊಂಡು ಮಲಗಿದ್ದನಂತೆ ಬೆಳಿಗ್ಗೆ ತೆಲೆಗ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾನೆ.

ಇನ್ನೂ ಮಹಾನಗರ ಪಾಲಿಕೆ ಮಾಜಿ ಕಾರ್ಪೋರೆಟರ್‌ ಮಗನ ದುರಂತ ಸಾವಿನ ಸುದ್ದಿ ಕೇಳಿ ರಾಜಕೀಯ ಮುಖಂಡರು, ಮಾಜಿ ಸಚಿವರು ಶವಾಗಾರಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಆದ್ರೆ ಮಕ್ಕಳಲ್ಲು ಖಿನ್ನತೆ ಕಾಣಿಸಿಕೊಳ್ತಿರೋದು, ಖಿನ್ನತೆಯಿಂದ ಹದಿಹರೆಯದ ಯುವಕರು ಆತ್ಮಹತ್ಯೆಗೆ ಶರಣಾಗ್ತಿರೋದು ದುರಂತವೇ ಸರಿ.

RELATED ARTICLES

Related Articles

TRENDING ARTICLES