Friday, April 25, 2025

ಭಾರತ ದಾಳಿ ನಡೆಸಿದರೆ ಸಂಪೂರ್ಣ ಯುದ್ದ ನಡೆಯುತ್ತದೆ: ಪಾಕ್​ ರಕ್ಷಣಾ ಸಚಿವ

ಲಾಹೋರ್​: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಪಾಕಿಸ್ತಾನದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು. ಪಹಲ್ಗಾಮ ಭಯೋತ್ಪಾದಕ ದಾಳಿ ಎರಡು ದೇಶಗಳ ನಡುವಿನ ಸಂಪೂರ್ಣ ಯುದ್ದಕ್ಕೆ ಇದು ಕಾರಣವಾಗಬಹುದು. ಜೊತೆಗೆ ಎರಡು ದೇಶಗಳು ಪರಮಾಣು ರಾಷ್ಟ್ರಗಳಾಗಿರುವುದರಿಂದ ಯುದ್ದದ ಬಗ್ಗೆ ಇಡೀ ವಿಶ್ವವೇ ಚಿಂತಿತವಾಗಿದೆ ಎಂದು ಹೇಳಿದರು.

ಪಹಲ್ಗಾಂನಲ್ಲಿ ನಡೆದಿರುವ ಭೀಕರ ಉಗ್ರ ದಾಳಿಗೆ ಭಾರತದ 26 ಪ್ರವಾಸಿಗರು ಸಾವನ್ನಪ್ಪಿದ್ದು. ದೇಶದೆಲ್ಲಡೆ ಈ ಉಗ್ರ ಕೃತ್ಯಕ್ಕೆ ಪ್ರತಿಕಾರ ತೆಗೆದುಕೊಳ್ಳಬೇಕೂ ಎಂಬ ಕೂಗು ಕೇಳಿ ಬರುತ್ತಿದೆ. ಇದರ ನಡುವೆ ಪಾಕ್​ ರಕ್ಷಣ ಸಚಿವ ಖವಾಜಾ ಆಸಿಫ್​ ಪಾಕ್​ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು.’ಭಾರತದ ಸಂಭವನೀಯ ಎಲ್ಲಾ ಕೃತ್ಯದ ಬಗ್ಗೆ ಪಾಕಿಸ್ತಾನ ಸಿದ್ದವಾಗಿದೆ. ಒಂದು ವೇಳೆ ಸಂಪೂರ್ಣ ದಾಳಿ ಏನಾದರೂ ಭಾರತ ನಡೆಸಿದರೆ, ನಿಸ್ಸಂಶಯವಾಗಿ ಸಂಪೂರ್ಣ ಯುದ್ದ ನಡೆಯುತ್ತದೆ ಎಂದು ಹೇಳಿದರು. ಇದನ್ನೂ ಓದಿ :ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ವಿಧಿವಶ

ಭಾರತ ಮತ್ತು ಪಾಕ್​ ನಡುವೆ ಒಂದು ವೇಳೆ ಪೂರ್ಣ ಪ್ರಮಾಣದ ಯುದ್ದ ನಡೆದರೆ ಪ್ರಪಂಚ ಈ ಕುರಿತು ಚಿಂತಸಬೇಕೂ ಎಂದ ಖವಾಜಾ ಆಸಿಫ್​ ‘ ಎರಡು ದೇಶಗಳು ಪರಮಾಣು ರಾಷ್ಟ್ರಗಳಾಗಿದ್ದು. ಈ ಕುರಿತು ಜಗತ್ತು ಚಿಂತಾಜನಕವಾಗಿದೆ. ಆದರೆ ನಾವು ಇದನ್ನು ಮಾತುಕತೆ ಮೂಲಕ ಬಗರೆಹರಿಸಿಕೊಳ್ಳಬಹುದು. ಭಾರತದಲ್ಲಿ ನಡೆದ ಉಗ್ರದಾಳಿ ಬಗ್ಗೆ ಭಾರತ ನಿರ್ದೇಶಿಸಿಲ್ಲ. ಭಾರತ ನಮ್ಮ ನೆಲದಲ್ಲಿ ಬಿಕ್ಕಟ್ಟು ಸೃಷ್ಟಿಸಲು ಇವನ್ನೆಲ್ಲಾ ಮಾಡುತ್ತಿದೆ. ನಾವು ಮತ್ತು ನಮ್ಮ ಸರ್ಕಾರ ಭಯೋತ್ಪದನೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :ಸ್ಮಾರ್ಟ್​ ಮೀಟರ್​ ಅಳವಡಿಕೆಗೆ ಹೈಕೋರ್ಟ್​ ತಡೆ: ಪವರ್ ಟಿವಿಯ ಬಿಗ್​ ಇಂಪ್ಯಾಕ್ಟ್​

ಇನ್ನು ಪಹಲ್ಗಾಂನಲ್ಲಿ ನಡೆದಿರುವ ದಾಳಿಯಲ್ಲಿ ನಮ್ಮ ಕೈವಾಡವಿಲ್ಲ ಎಂದು ಪಾಕ್​ ರಕ್ಷಣ ಸಚಿವ ಹೇಳಿಕೆ ನೀಡಿದ್ದು. ಭಾರತದಿಂದ ಪಾಕ್​ ಸಂಭಾವ್ಯ ದಾಳಿಯನ್ನು ನಿರೀಕ್ಷಿಸುತ್ತಿದೆ ಎಂದು ಇವರ ಹೇಳಿಕೆಯಿಂದ ತಿಳಿಯುತ್ತಿದೆ. ಇತ್ತ ಭಾರತವೂ ಕೂಡ ಯುದ್ದ ತಾಲೀಮು ಆರಂಭಿಸಿದ್ದು. ಪಾಕ್​ ವಿರುದ್ದ ರಾಜತಾಂತ್ರಿಕ ಕ್ರಮಗಳನ್ನೂ ಕೈಗೊಂಡಿದೆ.

RELATED ARTICLES

Related Articles

TRENDING ARTICLES