ಬೆಂಗಳೂರು : ಪವರ್ ಟಿವಿ ನಿರಂತರವಾಗಿ ವರದಿ ಮಾಡಿದ್ದ ಸ್ಮಾರ್ಟ್ ಮೀಟರ್ ಹಗರಣದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು. ಸ್ಮಾರ್ಟ್ ಮೀಟರ್ ಅಳವಡಿಕೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.
ಇಂಧನ ಇಲಾಖೆಯಲ್ಲಿ ನಡೆದಿರುವ ಅತಿದೊಡ್ಡ ಸ್ಮಾರ್ಟ್ ಮೀಟರ್ ಹಗರಣದ ಬಗ್ಗೆ ಪವರ್ ಟಿವಿ ನಿರಂತರವಾಗಿ ವರದಿ ಭಿತ್ತರಿಸಿತ್ತು. ಸಚಿವ ಕೆ.ಜೆ ಜಾರ್ಜ್ ಮತ್ತು ಇಂಧನ ಇಲಾಖೆಯ ಅಧಿಕಾರಿಗಳ ಭ್ರಷ್ಟಚಾರದ ಮುಖವಾಡವನ್ನ ರಾಜ್ಯದ ಜನದ ಮುಂದೆ ತೆರೆದಿಟ್ಟಿತ್ತು. ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ಇಂಧನ ಇಲಾಖೆ ನಡೆಸಲು ಸಿದ್ದವಾಗಿದ್ದ ಸಾವಿರಾರು ಕೋಟಿ ಹಗರಣದ ಬಗ್ಗೆ ಇಂಚಿಂಚು ವರದಿಯನ್ನು ಭಿತ್ತರಿಸಲಾಗಿತ್ತು. ಈ ಕುರಿತು ರಾಜ್ಯ ಬಿಜೆಪಿಯು ಕೂಡ ಲೋಕಾಯುಕ್ತಗೂ ದೂರು ನೀಡಿತ್ತು. ಇದೀಗ ಈ ಹಗರಣ ಹೈಕೋರ್ಟ್ ಮೆಟ್ಟಿಲೇರಿದ್ದು. ಸ್ಮಾರ್ಟ್ ಮೀಟರ್ ಅಳವಡಿಕೆಗೆ ಹೈಕೋರ್ಟ್ ತಡೆ ನೀಡಿದೆ. ಇದನ್ನೂ ಓದಿ :ಸಾವರ್ಕರ್ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ, ನೀವೇನು ಮಾಡಿದ್ದೀರಿ: ಸುಪ್ರೀಂ ಪ್ರಶ್ನೆ, ರಾಹುಲ್ಗೆ ಮುಖಭಂಗ
ಸ್ಮಾರ್ಟ್ ಮೀಟರ್ ಹಗರಣದ ಕುರಿತು ಅರ್ಜಿದಾರರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರ ಪೀಠ ‘ಹೊರ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ಗೆ 900 ರೂಪಾಯಿ ಇದೆ. ಆದರೆ ನಮ್ಮಲ್ಲಿ ಯಾಕೆ 5,810 ರೂಪಾಯಿ ಇದೆ..?. ಜೊತೆಗೆ KERC ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಎಂದು ಆದೇಶಿಸಿದೆ. ಈ ರೀತಿ ಆದೇಶಿಸಿದರೆ ಬಡವರು ಎಲ್ಲಿಗೆ ಹೋಗಬೇಕು. ದುಡ್ಡು ಇದ್ದವರು ಸ್ಮಾರ್ಟ್ ಮೀಟರ್ ಹಾಕಿಸಿಕೊಳ್ಳುತ್ತಾರೆ. ಇಲ್ಲದವರು ಸುಮ್ಮನಿರುತ್ತಾರೆ ಎಂದು ಇಂಧನ ಇಲಾಖೆಗೆ ಚಾಟಿ ಬೀಸಿತು.
ಇದನ್ನೂ ಓದಿ :ದಾಯಾದಿ ಕಲಹ: ಸತ್ತು ಮೂರು ದಿನವಾದರೂ ಅಂತ್ಯಕ್ರಿಯೆ ಮಾಡದ ಕುಟುಂಬಸ್ಥರು
ಇನ್ನು ಸ್ಮಾರ್ಟ್ ಮೀಟರ್ ಅಳವಡಿಕೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದ್ದು. ಬೆಸ್ಕಾಂ ಪರ ವಕೀಲರಿಗೆ ನೋಟಿಸ್ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿದ್ದು. ಪವರ್ ಟಿವಿ ವರದಿಗೆ ಮೊದಲ ಜಯ ಸಿಕ್ಕಂತಾಗಿದೆ.