ಚಿಕ್ಕಬಳ್ಳಾಪುರ : ದಾಯಾದಿಗಳ ನಡುವೆ ಜಮೀನು ವಿಷಯಕ್ಕೆ ಕಲಹವಾಗಿ ಮೃತಪಟ್ಟ ವ್ಯಕ್ತಿಯನ್ನು ಅಂತ್ಯಕ್ರಿಯೆ ನಡೆಸದೆ ಇಟ್ಟುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಕಳೆದ ಮೂರು ದಿನಗಳ ಹಿಂದೆ ಗ್ರಾಮದ ಕೋದಂಡಪ್ಪ(55) ಹೃದಯಘಾತದಿಂದ ಸಾವನ್ನಪ್ಪಿದ್ದರು. ಮೃತ ಕೋದಂಡಪ್ಪ ಮತ್ತು ನಾರಪ್ಪನ ನಡುವೆ ಹಲವು ವರ್ಷಗಳಿಂದ ಮನಸ್ತಾಪ ಉಂಟಾಗಿತ್ತು. ಅರಸನಹಳ್ಳಿ ಗ್ರಾಮದ ಸರ್ವೆ ನಂಬರ್ 2ರಲ್ಲಿನ ಜಮೀನಿಗಾಗಿ ದಾಯಾದಿಗಳ ಮಧ್ಯ ಕಲಹ ಏರ್ಪಟ್ಟಿತ್ತು. ಜಮೀನು ವಿಷಯ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿತ್ತು.ಇದನ್ನೂ ಓದಿ: ಚಾಮರಾಜನಗರಕ್ಕೆ ಬರುವುದರಿಂದ ನನ್ನ ಅಧಿಕಾರ ಮತ್ತಷ್ಟು ಗಟ್ಟಿಯಾಗುತ್ತೆ: ಸಿಎಂ ಸಿದ್ದರಾಮಯ್ಯ
ಆದರೆ ಕೋದಂಡಪ್ಪ ಹೃದಯಘಾತದಿಂದ ಮೂರು ದಿನದ ಹಿಂದೆ ಸಾವನ್ನಪ್ಪಿದ್ದನು. ಕೋದಂಡಪ್ಪನ ಕುಟುಂಬದವರು ವಿವಾದಿತ ಜಮೀನಿನಲ್ಲೇ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಆದರೆ ದಾಯಾದಿಗಳು ಯಾವುದೇ ಕಾರಣಕ್ಕೂ ಅಂತ್ಯಕ್ರಿಯೆ ಮಾಡಲ್ಲ ಎಂದು ಪಟ್ಟು ಹಿಡಿದಿದ್ದರು. ಹೀಗೆ ಮೂರು ದಿನದಿಂದ ಮೃತದೇಹದ ಅಂತ್ಯಕ್ರಿಯೆ ನಡೆಸದೆ ಕುಟುಂಬಸ್ಥರು ಕುಳಿತಿದ್ದಾರೆ.
ಇದನ್ನೂ ಓದಿ :ನೀರಜ್ ಚೋಪ್ರ ಬಗ್ಗೆ ಟೀಕೆ: ದೇಶದ ಹಿತಾಸಕ್ತಿಯೆ ಮೊದಲು ಎಂದ ಆಟಗಾರ
ಮಧ್ಯ ಪ್ರವೇಶಿಸಿರುವ ಸ್ಥಳೀಯ ತಹಶೀಲ್ದಾರ್ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಸೂಚಿಸಿದ್ದು.
ಮೃತ ಕೋದಂಡಪ್ಪ ಕುಟುಂಬದ ಜೊತೆ ತಹಶೀಲ್ದಾರ್ ಮಾತುಕತೆ ನಡೆಸಿ ಅಂತ್ಯಕ್ರಿಯೆ ನಡೆಸುವಂತೆ ಮನವೊಲಿಕೆ ಮಾಡಿದ್ದಾರೆ.