ಚಾಮರಾಜನಗರ : ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಚಾಮರಾಜನಗರ ಪ್ರವಾಸದಲ್ಲಿದ್ದು. ನೆನ್ನೆ(ಏ.24) ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಇಂದು ಸಿಎಂ ಸಿದ್ದರಾಮಯ್ಯ ಮಲೆ ಮಹದೇಶ್ವರನ ದರ್ಶನ ಪಡೆದಿದ್ದು. ಇಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ‘ಸಿಎಂ ಚಾಮರಾಜನಗರಕ್ಕೆ ಬಂದಾಗಲೆಲ್ಲಾ ನನ್ನ ಅಧಿಕಾರ ಮತ್ತಷ್ಟು ಗಟ್ಟಿಯಾಗುತ್ತದೆ’ ಎಂದು ಹೇಳಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ‘ ಚಾಮರಾಜನಗರ ಜಿಲ್ಲೆಗೆ ಬರುವುದರಿಂದ ನನಗೆ ಅಧಿಕಾರ ಮತ್ತಷ್ಟು ಗಟ್ಟಿಯಾಗುತ್ತಿದೆ. ನಾನು ಸಿಎಂ ಆದ ಮೇಲೆ 20ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ಇಲ್ಲಿಗೆ ಬರುವುದರಿಂದ ನಮಗೆ ಅಧಿಕಾರ ಗಟ್ಟಿಯಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ :ನೀರಜ್ ಚೋಪ್ರ ಬಗ್ಗೆ ಟೀಕೆ: ದೇಶದ ಹಿತಾಸಕ್ತಿಯೆ ಮೊದಲು ಎಂದ ಆಟಗಾರ
ಇನ್ನು ವಿನಯ್ ಕುಲಕರ್ಣಿ ಮನೆ ಮೇಲೆ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಸಿಎಂ ‘ ಇದು ರಾಜಕೀಯ ಪ್ರೇರಿತ ದಾಳಿ, ಕೇಂದ್ರದ ಒತ್ತಡದ ಮೇಲೆ ದಾಳಿ ಮಾಡಿದ್ದಾರೆ. ಆದರೆ ಬಿಜೆಪಿಯರ ಮೇಲೆ ಯಾಕೆ ಇಡಿ ದಾಳಿ ಮಾಡುತ್ತಿಲ್ಲ, ಬಿಜೆಪಿಯವರೆಲ್ಲ ಏನ್ ಸಾಚಾಗಳಾ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.