Monday, September 1, 2025
HomeUncategorizedಅಭಿವೃದ್ದಿ ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ: ವಿಪಕ್ಷಗಳಿಂದ ಟೀಕೆ

ಅಭಿವೃದ್ದಿ ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ: ವಿಪಕ್ಷಗಳಿಂದ ಟೀಕೆ

ದೆಹಲಿ : ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಮತ್ತು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಿಹಾರಕ್ಕೆ ಭೇಟಿ ನೀಡಿದ್ದು, ಪ್ರಧಾನಿ ಮೋದಿಯವರ ಈ ನಡೆ ಕಾಂಗ್ರೆಸ್​ ಮತ್ತು ರಾಷ್ಟ್ಟೀಯ ಜನತಾ ದಳದ ಟೀಕೆಗೆ ಗುರಿಯಾಗಿದೆ.

ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನಲೆ ಪ್ರಧಾನಿ ಮೋದಿ ಬಿಹಾರದ ಮಧುಬನಿಯಲ್ಲಿ 13,480 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಲಿದ್ದಾರೆ. ಆದರೆ ಈ ಭೇಟಿಯ ಕುರಿತು ಬಿಹಾರ್​ ಕಾಂಗ್ರೆಸ್​ ಕಿಡಿಕಾರಿದ್ದು. ದೇಶದಲ್ಲಿ ಭೀಕರ ಭಯೋತ್ಪಾದಕ ದಾಳಿಯಾಗಿ 28 ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರವೂ ಶೋಕದಲ್ಲಿದೆ, ಆದರೆ ಪ್ರಧಾನಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಹಾರ್ ಕಾಂಗ್ರೆಸ್​ ಎಕ್ಷ್​ನಲ್ಲಿ ಕಿಡಿಕಾರಿದೆ.

ಇದನ್ನೂ ಓದಿ :ಸುರಕ್ಷಿತವಾಗಿ ಕರುನಾಡಿಗೆ ಬಂದು ತಲುಪಿದ 178 ಕನ್ನಡಿಗರು..!

ಪ್ರಧಾನಿ ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಆರ್​ಜೆಡಿ ಮತ್ತು ಕಾಂಗ್ರೆಸ್​. “ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಚಿತೆಯನ್ನು ಇನ್ನೂ ಹೊತ್ತಿಸಲಾಗಿಲ್ಲ, ಆದರೆ ಈ ವರ್ಷ ಬಿಹಾರ ಚುನಾವಣೆ ಇರುವುದರಿಂದ ದೇಶದ ಪ್ರಧಾನಿ ಭಾಷಣ ಮಾಡಲು ಬಿಹಾರಕ್ಕೆ ಬರುತ್ತಿದ್ದಾರೆ. ಜನರನ್ನು, ಅಧಿಕಾರಿಗಳನ್ನು ಸಮಾವೇಶಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಘೋಷಿತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಡ ರಾಜ್ಯಗಳ ಹಣವನ್ನು ರಾಜಕೀಯ ಕಾರ್ಯಕ್ರಮಗಳಿಗೆ ವ್ಯರ್ಥ ಮಾಡುತ್ತಿವೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments