ಶಿವಮೊಗ್ಗ : ಜಮ್ಮು ಕಾಶ್ಮೀರದ ಪಹಲ್ಗಾಂಗೆ ಪ್ರವಾಸಕ್ಕೆಂದು ಹೋಗಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗ ಮಂಜುನಾಥ್ ರಾವ್ ಪಂಚಭೂತಗಳಲ್ಲಿ ಲೀನರಾಗಿದ್ದು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿದೆ.
ಏಪ್ರೀಲ್ 22ರಂದು ಪೆಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸೇರಿದಂತೆ 28 ಪ್ರವಾಸಿಗರು ಅಸುನೀಗಿದ್ದರು. ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಮಂಜುನಾಥ್ ಅವರ ಮೃತದೇಹವನ್ನು ರಸ್ತೆ ಮೂಲಕ ಶಿವಮೊಗ್ಗಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಚಿವ ಮಧುಬಂಗಾರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಮಧ್ಯಹ್ನದ ನಂತರ ಮಂಜುನಾಥ್ ಅವರ ಅಂತಿಮ ಯಾತ್ರೆ ಆರಂಭವಾಯಿತು.
ಇದನ್ನೂ ಓದಿ :ಭಾರತೀಯ ನೌಕಾಸೇನೆಯಿಂದ ಕ್ಷಿಪಣಿ ಪರೀಕ್ಷೆ: ಯುದ್ದ ತಾಲೀಮು ಆರಂಭ
ಅಂತಿಮ ಯಾತ್ರೆ ಸಾಗಿದ ದಾರಿಯುದ್ದಕ್ಕೂ ನೆರೆದಿದ್ದ ಜನರು ಘೋಷಣೆ ಕೂಗುತ್ತಾ ಮಂಜುನಾಥ್ ಅವರನ್ನು ಸ್ಮರಿಸಿದ್ದು. ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಸರ್ಕಾರದ ವತಿಯಿಂದ ಸಲ್ಲಿಸಬೇಕಾದ ಗೌರವಗಳನ್ನು ಸಲ್ಲಿಸಲಾಯಿತು, ನಂತರ ಬ್ರಾಹ್ಮಣ ಸಂಪ್ರಧಾಯದಂತೆ ಅಂತಿಮ ವಿಧಿವಿಧಾನಗಳನ್ನು ಆರಂಭಸಿದ ಮಂಜುನಾಥ್ ಪುತ್ರ ಅಭಿಜಯ್ ರಾವ್ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು.