Thursday, April 24, 2025

ಭಾರತೀಯ ನೌಕಾಸೇನೆಯಿಂದ ಕ್ಷಿಪಣಿ ಪರೀಕ್ಷೆ: ಯುದ್ದ ತಾಲೀಮು ಆರಂಭ

ನವದೆಹಲಿ : ಪಹಲ್ಗಾಮ್​ನಲ್ಲಿ ನಡೆದಿರುವ ಉಗ್ರ ದಾಳಿಗೆ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು. ಪಾಕ್​ ವಿರುದ್ದ ಪ್ರತಿಕಾರ ತೀರಿಸಿಕೊಳ್ಳಲು ಆಗ್ರಹ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಭಾರತದ ನೌಕಾಪಡೆ ಕ್ಷಿಪಣಿ ಪರೀಕ್ಷೆ ಮಾಡುವ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ದಾಳಿಯ ಬಗ್ಗೆ ದೇಶದ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು. ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಬೇಕೂ ಎಂಬ ಕೂಗು ಕೇಳಿ ಬರುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪಾಕ್​ ಇಂದು ಬೆಳಿಗ್ಗೆ ರಕ್ಷಣಾ ಇಲಾಖೆಯ ಸಭೆ ನಡೆಸಿದ್ದು, ಕ್ಷಿಪಣಿ ಪರೀಕ್ಷೆ ನಡೆಸಿದೆ. ಜೊತೆಗೆ ಅಜರ್​ಬೈಜಾನ್​ ಪ್ರವಾಸದಲ್ಲಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್​ ಅಸೀಂ ಮುನೀರ್​ ಕೂಡ ಪಾಕಿಸ್ತಾನಕ್ಕೆ ವಾಪಾಸಾಗಿದ್ದಾರೆ. ಇದನ್ನೂ ಓದಿ :ಭಯೋತ್ಪಾದಕರಷ್ಟೇ ಅಲ್ಲಾ, ಅವರಿಗೆ ಬೆಂಬಲ ಕೊಡುವವರನ್ನು ಬಿಡೋದಿಲ್ಲ: ನರೇಂದ್ರ ಮೋದಿ

ಇದರ ಬೆನ್ನಲ್ಲೇ ಭಾರತೀಯ ನೌಕ ಪಡೆ ಕೂಡ ಕ್ಷಿಪಣಿ ಪರೀಕ್ಷೆ ನಡೆಸಿದ್ದು. ಭಾರತೀಯ ನೌಕಪಡೆಯ ಯುದ್ದ ನೌಕೆ ಐಎನ್​ಎಸ್​ ಸೂರತ್​ನಿಂದ ಕ್ಷಿಪಣಿ ಪರೀಕ್ಷೆ ನಡೆಸಿದ್ದಾರೆ. ಈ ಮೂಲಕ ಪಾಕಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರಯೋಗ ನಡೆಸಿರುವ ಕ್ಷಿಪಣಿ ಸುಮಾರು 70 ಕಿಮೀ ದೂರದಲ್ಲಿರುವ ಗುರಿಯನ್ನು ಭೇದಿಸುವ ಸಾಮರ್ಥವಿದ್ದು. ಭಾರತ ಮತ್ತು ಇಸ್ರೇಲ್​ ಜಂಟಿಯಾಗಿ ಈ ಕ್ಷಿಪಣಿಯನ್ನು ನಿರ್ಮಿಸಿದೆ.

ಇದನ್ನೂ ಓದಿ :ಭಾರತದ ಮೇಲೆ ಉಗ್ರ ದಾಳಿ: ಕೇಕ್​ ತಿಂದು ಸಂಭ್ರಮಿಸಿದ ಪಾಕ್​ ರಾಯಭಾರಿ ಕಛೇರಿ ಸಿಬ್ಬಂದಿಗಳು..!

ಒಟ್ಟಾರೆ ಭಯೋತ್ಪಾದಕರಿಂದ ಕಾಶ್ಮೀರದಲ್ಲಿ ನಡೆದಿರುವ ಉಗ್ರ ದಾಳಿಯ ಬಗ್ಗೆ ಭಾರತ ದೃಡ ನಿಲುವನ್ನು ತೆಗೆದುಕೊಂಡಿದ್ದು. ಪ್ರಧಾನಿ ಮೋದಿಯೋ ಕೂಡ ಉಗ್ರರನ್ನು ಹುಡುಕಿ ಹೊಡೆಯುತ್ತೇವೆ ಎಂಬ ಶಪಥ ಮಾಡಿದ್ದಾರೆ.

RELATED ARTICLES

Related Articles

TRENDING ARTICLES