Thursday, April 24, 2025

ಭಾರತ ದಾಳಿ ಮಾಡಿದರೆ, ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ: ಮೊಂಡುತನ ಪ್ರದರ್ಶಿಸಿದ ಪಾಕ್​ ಸಚಿವೆ

ಲಾಹೋರ್‌: ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಸಂಭವಿಸಿದ ಉಗ್ರ ದಾಳಿಯಲ್ಲಿ 28 ಪ್ರವಾಸಿಗರು ಸಾವನ್ನಪ್ಪಿದ್ದು. ಈ ಘಟನೆಗೆ ಭಾರತದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಾಕೋಟ್ ಏರ್​ಸ್ಟ್ರೈಕ್ ​ ಮಾದರಿಯ ಪ್ರತಿಕಾರ ತೀರಿಸಿಕೊಳ್ಳಬೇಕು ಎಂಬ ಕೂಗುಗಳು ಕೇಳಿ ಬರುತ್ತಿದೆ. ಈ ಕುರಿತು ಪಾಕ್​ನ ಸಚಿವೆ ಹೇಳಿಕೆ ನೀಡಿದ್ದು, ಪ್ರತಿಕಾರವಾಗಿ ಭಾರತವೇನಾದರೂ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ತನ್ನ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸಚಿವೆ ಹೇಳಿದ್ದಾರೆ.

ಭಾರತದಿಂದ ನಡೆಯಬಹುದಾದ ಕಾರ್ಯಚರಣೆಯ ಬಗ್ಗೆ ಭೀತಿಯಲ್ಲಿರುವ ಪಾಕ್​ ಭಾರತದ ಗಡಿಗೆ ಹೆಚ್ಚಿನ ಸೇನಾ ಯುದ್ದ ವಿಮಾನಗಳನ್ನು ನಿಯೋಜಿಸುತ್ತಿದೆ. ಇದರ ನಡುವೆ ಪಾಕ್​ನ ಪಂಜಾಬ್​ ಪ್ರಾಂತ್ಯದ ಸಚಿವೆ  ಅಜ್ಮಾ ಬೊಖಾರಿ ಮೊಂಡತನದ ಹೇಳಿಕೆ ನೀಡಿದ್ದು. ‘ ಒಂದು ವೇಳೆ ಸುಳ್ಳು ಆರೋಪದ ಮೇಲೆ ಭಾರತ ಯಾವುದೇ ದುಸ್ಸಾಹಸವನ್ನು ಕೈಗೊಂಡರು, ಅದಕ್ಕೆ ಪ್ರತಿಯಾಗಿ ಭೀಕರ ಪರಿಣಾಮ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ :ಪಹಲ್ಗಾಂನಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ

ಕಳೆದ ಬಾರಿ ಅಭಿನಂದನ್‌ ವರ್ಧಮಾನ್ ಅವರಿಗೆ ಚಹಾ ನೀಡಿದ್ದೆವು. ಆದರೆ ಈ ಬಾರಿ ಅಷ್ಟು ಕನಿಕರ ತೋರುವುದಿಲ್ಲ. ಅತಿಥಿ ಒಮ್ಮೆ ಬಂದರೆ ಸಹನೀಯ. ಆದರೆ ಪ್ರತಿ ಬಾರಿ ಬಂದರೆ, ಪಾಕಿಸ್ತಾನದ ಸೇನೆ, ಸರ್ಕಾರ ಮತ್ತು ಜನರು ಅವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ’ ಎಂದು ಮೊಂಡುತನ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ :Pahalgam Terror Attack : ಅಮಿತ್​ ಶಾ, ಮೋದಿ ಕಡೆ ಬೊಟ್ಟು ಮಾಡಿದ ಪ್ರಿಯಾಂಕ್​ ಖರ್ಗೆ

ಇತ್ತ ಭಾರತ ಸಿಂಧೂ ನದಿ ಒಪ್ಪಂದ ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ಥಾನ ಸರ್ಕಾರ ಗುರುವಾರ ತುರ್ತು ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಕರೆದಿದ್ದು.  ಈ ಬಗ್ಗೆ ಮಾತನಾಡಿರುವ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್, ಪ್ರಧಾನಿ ಶಹಬಾಜ್ ಷರೀಫ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲಾ ಇಲಾಖೆಯ ಮುಖ್ಯಸ್ಥರೂ ಭಾಗಿಯಾಗಲಿದ್ದು, ಭಾರತದ ಕ್ರಮಕ್ಕೆ ಸರಿಯಾಗಿ ಉತ್ತರಿಸಲಿದ್ದೇವೆ’ ಎಂದಿದ್ದಾರೆ.

RELATED ARTICLES

Related Articles

TRENDING ARTICLES