ಶಿವಮೊಗ್ಗ : ಜಮ್ಮು ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್ ರಾವ್ ಸಾವನ್ನಪ್ಪಿದ್ದು. ಅವರ ಅಂತಿಮ ದರ್ಶನದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ಕಾಶ್ಮೀರದ ಜನ ಎಲ್ಲವನ್ನೂ ಮರೆತು ದುಡಿಮೆ ಮಾಡಿಕೊಂಡಿದ್ದರು, ಆದರೆ ಇದೀಗ ಅವರ ಜೀವನದ ಹಳಿ ತಪ್ಪಿಸಿದ್ದಾರೆ. ಈ ವಿಚಾರದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಸರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಪಹಲ್ಗಾಂನಲ್ಲಿ ನಡೆದಿರುವ ಉಗ್ರ ದಾಳಿಯ ಬಗ್ಗೆ ದೇಶದೆಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರ ಗುಂಡಿಗೆ ಬಲಿಯಾದ ಪ್ರವಾಸಿಗರ ಪಾರ್ಥಿವವನ್ನು ಸ್ವಗ್ರಾಮಗಳಿಗೆ ರವಾನಿಸಿದ್ದು. ಅದರಂತೆ ಕರ್ನಾಟಕದ ಮಂಜುನಾಥ್ ಅವರ ಶವವು ಶಿವಮೊಗ್ಗಕ್ಕೆ ತಲುಪಿದೆ. ಮಂಜುನಾಥ್ ರಾವ್ ಅವರ ಪಾರ್ಥಿವದ ಅಂತಿಮ ದರ್ಶನ ಪಡೆದ ಜೋಶಿ ಹೇಳಿಕೆ ನೀಡಿದ್ದು. ‘ಕಾಶ್ಮೀರದ ಜನರು ಎಲ್ಲವನ್ನು ಮರೆತು ದುಡಿಮೆ ಮಾಡಿಕೊಂಡಿದ್ದರು, ಆದರೆ ಈ ಘಟನೆ ಎಲ್ಲವನ್ನು ತಲೆಕೆಳಗಾಗಿಸಿದೆ. ನಮ್ಮ ಪ್ರಧಾನಿ, ನಮ್ಮ ರಕ್ಷಣಾ ಸಚಿವರು ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಈ ಘಟನೆ ಕಾಶ್ಮೀರದ ಅಭಿವೃದ್ಧಿ ಹಾದಿಗೆ ಬಹಳ ದೊಡ್ಡ ಹಿನ್ನಡೆ ಉಂಟುಮಾಡಿದೆ.
ಇದನ್ನೂ ಓದಿ :ಕನ್ನಡಿಗರ ರಕ್ಷಣೆಯಲ್ಲಿ, ಕರ್ನಾಟಕ ಸರ್ಕಾರ ಸ್ವಂದಿಸಿದ ರೀತಿ ಶ್ಲಾಘನೀಯ: ಥಾವರ್ ಚಂದ್ ಗೆಹ್ಲೋಟ್
ಜಾತಿ, ಧರ್ಮ ಮೀರಿದ ಒಂದು ವ್ಯವಸ್ಥೆ ಈ ದಾಳಿಯಿಂದ ಹಳಿ ತಪ್ಪಿದೆ. ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಪ್ರಧಾನ ಮಂತ್ರಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಪಾಕಿಸ್ತಾನವನ್ನು ಏಕಾಂಗಿಯಾಗಿಮಾಡಲು ನಿರ್ಧಾರ ಮಾಡಲಾಗಿದೆ. ಪಾಕಿಸ್ಥಾನ ಆರ್ಥಿಕವಾಗಿ ಕುಂಠಿತವಾಗುವುದು ದಿಟವಾಗಿದೆ. ಪಾಕಿಸ್ಥಾನಕ್ಕೆ ಜಲದಿಗ್ಭಂಧನ ಕೂಡ ಹಾಕಲಾಗಿದೆ ಎಂದು ಹೇಳಿದರು.
ರಾರ್ಬಟ್ ವಾದ್ರ ಪಾಕಿಸ್ತಾನಕ್ಕೆ ಪ್ರೋತ್ಸಾಹ ಕೊಟ್ಟಿದ್ದಾರೆ..!
ರಾಬರ್ಟ್ ವಾದ್ರ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಜೋಶಿ ‘ರಾಬರ್ಟ್ ವಾದ್ರಾ ಹೇಳಿಕೆ ಭಾರತದ ಹೋರಾಟಕ್ಕೆ ತೊಂದರೆಯಾಗುತ್ತದೆ. ಪರೋಕ್ಷವಾಗಿ ಪಾಕಿಸ್ತಾನಕ್ಕೆ ಪ್ರೋತ್ಸಾಹ ಕೊಟ್ಟಂತೆ ಆಗಿದೆ. ನಾನು ಇದನ್ನು ರಾಜಕಾರಣಕ್ಕೆ ಬಳಸಲು ಇಚ್ಚಿಸುವುದಿಲ್ಲ. ಈಗ ಎಲ್ಲ ಪಕ್ಷಗಳು ಒಂದಾಗಿ ಎದುರಿಸಬೇಕು.
ಇದನ್ನೂ ಓದಿ :ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ RSS ಮುಖಂಡನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಇಲ್ಲಿ ಹಿಂದು-ಮುಸ್ಲಿಂ ಅನ್ನುವುದಕ್ಕಿಂತ ಹೆಚ್ಚು ಮಾನವತೆ ಮುಖ್ಯ. ನಾನು ಕಾಂಗ್ರೆಸ್ ವಿರುದ್ದವೂ ಹೇಳಿಕೆ ನೀಡಲ್ಲ. ಯಾಕಂದ್ರೆ ಮಲ್ಲಿಕಾರ್ಜುನ ಖರ್ಗೆಯವರು ಸರಿಯಾಗಿ ಹೇಳಿಕೆ ನೀಡಿದ್ದಾರೆ. ಅಲ್ಲಿ ಇಲ್ಲಿ ಯಾರೋ ಒಬ್ಬಿಬ್ಬರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ರಾಜ್ಯ ಸರ್ಕಾರ ಪರಿಹಾರದ ಮೊತ್ತ ಏರಿಸಬೇಕು