Thursday, April 24, 2025

ಭರತ್​ ಭೂಷಣ್​ ಅಂತ್ಯಕ್ರಿಯೆ: ತಂದೆಯನ್ನು ಕಳೆದುಕೊಂಡು ರೋಧಿಸುತ್ತಿದೆ 3 ವರ್ಷದ ಕಂದಮ್ಮ

ಬೆಂಗಳೂರು : ಜಮ್ಮು- ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ತೆತ್ತಿದ್ದ ಭರತ್​ ಭೂಷಣ್​ ಅವರ ಅಂತ್ಯ ಸಂಸ್ಕಾರ ಮುಗಿದಿದ್ದು. ಹೆಬ್ಬಾಳದ ಚಿತಾಗಾರದಲ್ಲಿ ಭರತ್ ಅಂತ್ಯ ಸಂಸ್ಕಾರ ನೆರವೇರಿದೆ. ಅಂತ್ಯಸಂಸ್ಕಾರದ ವೇಳೆ ಮೂರು ವರ್ಷದ ಹಸುಗೂಸನ್ನ ಎದೆಗಪ್ಪಿಕೊಂಡು ನಿಂತಿದ್ದ ಭರತ್ ಅವರ ಪತ್ನಿ ಸುಜಾತ ಅವರ ದೃಷ್ಯ ಎಂತಹ ಕಲ್ಲು ಹೃದಯದವರ ಕಣ್ಣಲ್ಲೂ ನೀರು ತರಿಸುವಂತಿದೆ.

ಪ್ರವಾಸಕ್ಕೆಂದು ಪೆಹಲ್ಗಾಮ್​ಗೆ ತೆರಳಿದ್ದ ಭರತ್​ ಭೂಷಣ್​ ಉಗ್ರರ ದಾಳಿಯಲ್ಲಿ ಪ್ರಾಣ ತೆತ್ತಿದ್ದರು. ಅವರ ಮೃತದೇಹವನ್ನು ಇಂದು ಮುಂಜಾನೆ ತಾಯ್ನಾಡಿಗೆ ತರಲಾಗಿತ್ತು.  ಮತ್ತಿಕೆರೆಯ‌ ಸುಂದರ್ ನಗರದಲ್ಲಿರುವ ಭರತ್ ಭೂಷಣ್ ನಿವಾಸದ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಸೇರಿದಂತೆ ಹಲವರು ಭರತ್​ ಅವರ ಅಂತಿಮ ದರ್ಶನ ಪಡೆದಿರು. ಇದನ್ನೂ ಓದಿ :ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: 3647 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗೆ ಅನುಮೋದನೆ

ಮಧ್ಯಹ್ನಾದ ಬಳಿಕ ಹೆಬ್ಬಾಳ ಚಿತಾಗಾರಕ್ಕೆ ಭರತ್​ ಪಾರ್ಥಿವವನ್ನು ತರಲಾಯಿತು. ಇಲ್ಲಿ ಗಣ್ಯರು, ಸಂಬಂದಿಕರು, ರಾಜಕಾರಣಿಗಳು ಸೇರಿದಂತೆ ಹಲವರು ಭರತ್​ಗೆ ಅಂತಿಮ ನಮನ ಸಲ್ಲಿಸಿದರು. ಸರ್ಕಾರದ ಪರವಾಗಿ ಸಲ್ಲಿಸಬೇಕಿದ್ದ ಅಂತಿಮ ಗೌರವವನ್ನು ಸಲ್ಲಿಸಲಾಯಿತು. ನಂತರ ಭರತ್​ ಅವರ ಅಣ್ಣ ಅಂತಿಮ ವಿಧಿವಿಧಾನಗಳನ್ನು ಆರಂಭಿಸಿದರು. ಒಕ್ಕಲಿಗ ಸಂಪ್ರದಾಯದಂತೆ ಭರತ್​ ಭೂಷಣ್​ ಅವರ ಅಂತಿಮ ಸಂಸ್ಕಾರ ನೆರವೇರಿತು.

ಇದನ್ನೂ ಓದಿ :ಪಹಲ್ಗಾಂನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್​​ ಪಂಚಭೂತಗಳಲ್ಲಿ ಲೀನ

ಮತ್ತೊಂದೆಡೆ ತಂದೆಯನ್ನು ಕಳೆದುಕೊಂಡು, ಏನಾಗಿದೇ ಎಂಬುದರ ಅರಿವು ಇಲ್ಲದೆ ರೋಧಿಸುತ್ತಿದ್ದ ಮಗುವಿನ ದೃಷ್ಯ ಎಂತವರ ಕಣ್ಣಲ್ಲೂ ಕಣ್ಣೀರು ತರಿಸುವಂತಿತ್ತು. ಇಂತಹ ದುಷ್ಕೃತ್ಯಕ್ಕೆ ಕಾರಣವಾದವರಿಗೆ ತಕ್ಕ ಶಿಕ್ಷೆಯಾಗಬೇಕೆಂಬುದೇ ಪವರ್ ಟಿವಿ ಆಶಯ.

RELATED ARTICLES

Related Articles

TRENDING ARTICLES