ಜಮ್ಮು & ಕಾಶ್ಮೀರದ ಪಹಲ್ಗಾಮ್ನಲ್ಲಿ ಭೀಕರ ಉಗ್ರ ದಾಳಿ ನಡೆದಿದ್ದು. ಘಟನೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 26 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆಗೆ ರಾಷ್ಟ್ರವ್ಯಾಪ್ತಿ ಸಂತಾಪ ವ್ಯಕ್ತವಾಗುತ್ತಿದ್ದು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಘಟನೆಗೆ ಸಂತಾಪ ಸೂಚಿಸಿದ್ದು. ಇಂದು ನಡೆಯುವ ಐಪಿಎಲ್ ಪಂದ್ಯದ ವೇಳೆ ಉಭಯ ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಆಟವಾಡಲಿದ್ದಾರೆ.
ಇದನ್ನೂ ಓದಿ :ಅಮೆರಿಕಾ, ಪೆರು ಪ್ರವಾಸ ಮೊಟಕುಗೊಳಿಸಿದ ನಿರ್ಮಲಾ ಸೀತಾರಾಮನ್: ಭಾರತಕ್ಕೆ ವಾಪಾಸ್
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ 41ನೇ ಐಪಿಎಲ್ ಪಂದ್ಯ ನಡೆಯಲಿದ್ದು. ಆಟಕ್ಕೂ ಮೊದಲು ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ 1 ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಗುತ್ತದೆ. ಪಂದ್ಯದಲ್ಲಿ ಉಭಯ ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಟವಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮೌನಚರಣೆಯ ಜೊತೆಗೆ ಪಂದ್ಯದಲ್ಲಿ ಯಾವುದೇ ಚಿಯರ್ ಲೀಡರ್ಗಳು ಇರುವುದಿಲ್ಲ ಎಂದು ತಿಳಿದು ಬಂದಿದೆ.