Wednesday, May 14, 2025

Pahalgam Terror Attack : ಅಮಿತ್​ ಶಾ, ಮೋದಿ ಕಡೆ ಬೊಟ್ಟು ಮಾಡಿದ ಪ್ರಿಯಾಂಕ್​ ಖರ್ಗೆ

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ನಡೆಸಲಾಗಿರುವ ಭೀಕರ ಉಗ್ರರ ದಾಳಿಯನ್ನ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.

ತನ್ನನ್ನು ಚಾಣಕ್ಯ ಎಂದು ಕರೆದುಕೊಳ್ಳುವ ಗೃಹಮಂತ್ರಿ ಅಮಿತ್ ಶಾ ಅವರು ಸರ್ಕಾರಗಳನ್ನು ಕೆಡವುದರಲ್ಲಿ, ಪಕ್ಷಗಳನ್ನು ಒಡೆಯುವಲ್ಲಿ ಮತ್ತು ಚುನಾವಣೆಗಳನ್ನು ತಮ್ಮ ಇಚ್ಛೆಗೆ ತಿರುಗಿಸುವಲ್ಲಿ ತೊಡಗಿರುವಾಗ, ಇಂತಹ ದುರ್ಘಟನೆಗಳು ಸಂಭವಿಸುತ್ತವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಎಲ್ಲಿದೆ ಗುಪ್ತಚರ ಇಲಾಖೆ?

ಎಲ್ಲಿದೆ ಕಣ್ಗಾವಲು ಪಡೆ?

ಜೇಮ್ಸ್​ ಬಾಂಡ್​​ ದೋವಲ್​ ಎಲ್ಲಿದ್ದಾರೆ? ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಪುಲ್ವಾಮಾ ಮತ್ತು ಪಹಲ್ಗಾಮ್ ಈ ಎರಡು ಘಟನೆಗಳಲ್ಲಿ ಭದ್ರತಾ ವೈಫಲ್ಯಗಳ ಎದ್ದು ಕಾಣುತ್ತಿದೆ. ಆದರೆ, ಸರ್ಕಾರ ಎರಡನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಮತ್ತೊಂದು ಆಘಾತಕಾರಿ ಸಂಗತಿ ಎಂದರೆ, ಕೋವಿಡ್ ಸಂದರ್ಭದಲ್ಲಿ ಹಣ ಉಳಿಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರವು 1.8 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಕಡಿಮೆಗೊಳಿಸಿದ್ದಾರೆ ಎಂದು ಪ್ರಿಯಾಂಕ್​ ಖರ್ಗೆ ಅವರು ಆರೋಪಿಸಿದ್ದಾರೆ.

ಅಮಿತ್​ ಶಾ ಅವರು ತಮ್ಮ ಮಗ ಜಯ್​ ಶಾ ಅವರನ್ನು ಐಸಿಸಿ ಅಧ್ಯಕ್ಷರನ್ನಾಗಿಸಲು ತೋರಿದ ಉತ್ಸಾಹ, ಭಯೋತ್ಪಾದಕರ ಕಡೆ ತೋರಿಸಿದ್ದರೆ ಚೀನಾವು ಗಡಿಯಲ್ಲಿ ಶಾಂತಿಯುತ್ತವಾಗಿರುತ್ತಿತ್ತು. ಅದುವಲ್ಲದೇ ಈ ದಾಳಿ ಸಹ ನಡೆಯುತ್ತಿರಲಿಲ್ಲ ಎಂದು ಶಾ ವಿರುದ್ಧ ಗುಡುಗಿದ್ದಾರೆ.

ಸದ್ಯ ಈ ಸರ್ಕಾರವು ಈ ಉಗ್ರರ ದಾಳಿಯನ್ನು ಲಘುವಾಗಿ ತೆಗೆದುಕೊಳ್ಳಲಿದ್ದು, ಸಾವನ್ನಪ್ಪಿರುವವರನ್ನು ಕಡಿಮೆ ತೋರಿಸಿ ಈ ದುರಂತವನ್ನು ಸಮುದಾಯಗಳ ನಡುವೆ ದ್ವೇಷ ಹರಡಲು ಬಳಸಿಕೊಳ್ಳಲಿದೆ ಅಥವಾ ಎಂದಿನಂತೆ ಕಾಂಗ್ರೆಸ್ ಮೇಲೆ ದೋಷಾರೋಪಣೆಯಲ್ಲಿ ತೊಡಗಲಿದೆ ಎಂದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗೃಹಮಂತ್ರಿ ಅಮಿತ್ ಶಾ ಅವರ ರಾಜೀನಾಮೆ ಕೇಳುವ ಧೈರ್ಯವಿದೆಯೇ? ಎಂದು ಖಡಕ್​ ಆಗಿ ಪ್ರಶಿಸಿದ್ದಾರೆ.

ಇನ್ನು ಆರ್‌ಎಸ್‌ಎಸ್‌ನ ಕೋಪವು ಕೇವಲ ವಿಜಯದಶಮಿ ಉತ್ಸವದ ಭಾಷಣಗಳಿಗೆ ಮಾತ್ರವೇ ಸೀಮಿತವೇ? ಅಥವಾ ಅಲ್ಪಸಂಖ್ಯಾತರು ಮತ್ತು ದಲಿತರ ವಿರುದ್ಧ ಮಾತ್ರವೇ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಟುವಾಗಿ ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES