ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ 26 ಜನ ಬಲಿಯಾಗಿದ್ದು, ಭಯೋತ್ಪಾದಕರ ದಾಳಿಯನ್ನು ತಡೆಯಲು ಬಂದ ಸ್ಥಳೀಯ ಮುಸ್ಲಿಂ ಯುವಕನೋರ್ವ ಘಟನೆಯಲ್ಲಿ ಅಸುನೀಗಿದ್ದು ಮೃತ ಯುವಕನನ್ನು ಸೈಯದ್ ಆಧಿಲ್ ಹುಸೇನ್ ಶಾ ಎಂದು ಗುರುತಿಸಲಾಗಿದೆ.
ಸೈಯದ್ ಆಧಲ್ ಹುಸೇನಿ ಶಾ ಪಹಲ್ಗಾಮ್‌ನಲ್ಲಿ ಕುದುರೆ ರೈಡರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರವಾಸಕ್ಕೆ ಬರುವ ಅತಿಥಿಗಳನ್ನು ಕುದುರೆ ಮೇಲೆ ಕೂರಿಸಿಕೊಂಡು ಕಾಶ್ಮೀರದ ಸೌಂದರ್ಯ ದರ್ಶನ ಮಾಡಿಸುತ್ತಿದ್ದರು. ಆದರೆ, ನೆನ್ನೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸುವ ವೇಳೆ ಸ್ಥಳದಲ್ಲಿ ಸೈಯದ್ ಆದಿಲ್ ಹುಸೇನಿ ಶಾ ಸಹ ಇದ್ದರು. ಈ ಸಂದರ್ಭದಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿದ್ದ ಉಗ್ರರಿಂದ ಬಂದೂಕು ಕಸಿದುಕೊಳ್ಳಲು ಯತ್ನಿಸಿ, ಕಾಶ್ಮೀರಕ್ಕ ಬಂದ ಅಥಿತಿಗಳನ್ನು ಕೊಲ್ಲಬೇಡಿ ಎಂದು ಬೇಡಿಕೊಂಡ ಉಗ್ರರು ಸೈಯದ್ ಮೇಲೆ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ :ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯದಿಂದ ಉಗ್ರ ದಾಳಿಯಾಗಿದೆ: ಸಿಎಂ ಸಿದ್ದರಾಮಯ್ಯ
ಸೈಯದ್ ತಂದೆ ಹೈದರ್ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ನನ್ನ ಮಗ ನಿನ್ನೆ ಕೆಲಸಕ್ಕೆಂದು ಪಹಲ್ಗಾಮ್‌ಗೆ ಹೋಗಿದ್ದ ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಳಿಯ ಬಗ್ಗೆ ನಮಗೆ ತಿಳಿಯಿತು. ನಾವು ಅವನಿಗೆ ಕರೆ ಮಾಡಿದೆವು, ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಜೆ 4:40ಕ್ಕೆ ಅವನ ಫೋನ್ ಆನ್ ಆಯ್ತು. ಆದರೆ, ಯಾರೂ ಉತ್ತರಿಸಲಿಲ್ಲ. ನಾವು ಪೊಲೀಸ್ ಠಾಣೆಗೆ ಧಾವಿಸಿದೆವು. ಆಗ ಅವನಿಗೆ ಗಾಯವಾಗಿರುವುದು ಗೊತ್ತಾಯಿತು ಎಂದು ತಿಳಿಸಿದರು.